ADVERTISEMENT

ಪತಂಜಲಿ ಫುಡ್ಸ್‌ ವರಮಾನ ಶೇಕಡ 26.38ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:38 IST
Last Updated 7 ಫೆಬ್ರುವರಿ 2023, 2:38 IST
   

ಬೆಂಗಳೂರು: ಪತಂಜಲಿ ಫುಡ್ಸ್‌ ಲಿಮಿಟೆಡ್‌ ಕಂಪನಿಯು ಡಿಸೆಂಬರ್‌ ತ್ರೈಮಾಸಿಕದ ವರಮಾನದಲ್ಲಿ ಶೇಕಡ 26.38ರಷ್ಟು ಹೆಚ್ಚಳ ಕಂಡಿದೆ. ಕಂಪನಿಯ ವರಮಾನವು ₹ 7,963 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ವರಮಾನವು ₹ 6,301 ಕೋಟಿ ಆಗಿತ್ತು.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿ ದಾಖಲಿಸಿರುವ ತೆರಿಗೆ ನಂತರದ ಲಾಭವು ₹ 269 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 14.96ರಷ್ಟು ಹೆಚ್ಚು.

ವಿತರಣಾ ಜಾಲವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಎರಡನೆಯ ಹಂತದ ಮಾರಾಟಗಳ ಮೇಲೆ ನಿಗಾ ಇಡಲು ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕಂಪನಿಯು ಹೂಡಿಕೆ ಮಾಡುವುದನ್ನು ಮುಂದುವರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.