ADVERTISEMENT

ಪೇಟಿಎಂ ‘ಜಿಎಂವಿ’ ₹ 1.66 ಲಕ್ಷ ಕೋಟಿಗೆ ಏರಿಕೆ

ಪಿಟಿಐ
Published 13 ಡಿಸೆಂಬರ್ 2021, 12:46 IST
Last Updated 13 ಡಿಸೆಂಬರ್ 2021, 12:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾಲ ವಿತರಣೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಕಂಪನಿಯ ಸರಾಸರಿ ವಾಣಿಜ್ಯ ಮೌಲ್ಯವು (ಜಿಎಂವಿ) ಅಕ್ಟೋಬರ್‌–ನವೆಂಬರ್‌ ಅವಧಿಯಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಡಿಜಿಟಲ್‌ ಪಾವತಿ ಮತ್ತು ಹಣಕಾಸು ಸೇವೆಗಳನ್ನು ನೀಡುವ ಪೇಟಿಎಂ ಸೋಮವಾರ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಅಕ್ಟೋಬರ್–ನವೆಂಬರ್ ಅವಧಿಯಲ್ಲಿ ಕಂಪನಿಯ ಜಿಎಂವಿ ₹ 72,800 ಕೋಟಿ ಇತ್ತು. ಪ್ರಸಕ್ತ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1.66 ಲಕ್ಷ ಕೋಟಿಗೆ ಏರಿಕೆ ಕಂಡಿದೆ ಎಂದು ಹೇಳಿದೆ.

ಪೇಟಿಎಂ ವೇದಿಕೆಯ ಮೂಲಕ ಸಾಲ ವಿತರಣೆಯ ಸಂಖ್ಯೆಯು 5.30 ಲಕ್ಷದಿಂದ 27 ಲಕ್ಷಕ್ಕೆ (ನಾಲ್ಕು ಪಟ್ಟು) ಹೆಚ್ಚಾಗಿದೆ. ಮೌಲ್ಯದ ಲೆಕ್ಕದಲ್ಲಿ ₹ 280 ಕೋಟಿಯಿಂದ ₹ 13,200 ಕೋಟಿಗೆ ಏರಿಕೆ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.