ನವದೆಹಲಿ: ತನ್ನ ಒಡೆತನದ ಪೇಟಿಎಂ ಮನಿ ಕಂಪನಿಯು, ವಿವಿಧ ಕಂಪನಿಗಳ ಐಪಿಒದಲ್ಲಿ (ಆರಂಭಿಕ ಸಾರ್ವಜನಿಕ ಹೂಡಿಕೆ ಅವಕಾಶ) ಹೂಡಿಕೆ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಪೇಟಿಎಂ ಸೋಮವಾರ ಹೇಳಿದೆ. ಈ ನಿರ್ಧಾರದಿಂದಾಗಿ ರಿಟೇಲ್ ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಅವಕಾಶ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಿಟೇಲ್ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಐಪಿಒ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗಿದೆ, ಸರಳಗೊಳಿಸಲಾಗಿದೆ. ಬಳಕೆದಾರರ ಅನುಭವವನ್ನು ವೃದ್ಧಿಸಲು ಹೊಸ ತಾಂತ್ರಿಕ ವೈಶಿಷ್ಟ್ಯಗಳನ್ನು ಅಳವಡಿಸುವುದನ್ನು ಮುಂದುವರಿಸಲಾಗುವುದು ಎಂದು ಹೇಳಿದೆ.
ಈ ಸೌಲಭ್ಯ ಬಿಡುಗಡೆ ಮಾಡಿದ ಒಂದು ವರ್ಷದೊಳಗಾಗಿ ಶೇಕಡ 8ರಿಂದ ಶೇ 10ರಷ್ಟು ಮಾರುಕಟ್ಟೆ ಪಾಲು ಹೊಂದುವ ಗುರಿ ಪೇಟಿಎಂ ಮನಿ ಕಂಪನಿಗೆ ಇದೆ.
ಹೂಡಿಕೆದಾರರ ಬ್ಯಾಂಕ್ ಖಾತೆಗಳಿಗೆ ಜೋಡಿಸಿರುವ ಯುಪಿಐ ಐಡಿ ಮೂಲಕಐಪಿಒಗಳಿಗಾಗಿ ತ್ವರಿತವಾಗಿ ಅರ್ಜಿ ಸಲ್ಲಿಸಲು ಪೇಟಿಎಂ ಮನಿ ಅವಕಾಶ ಕಲ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.