ಪೇಟಿಎಂ
ನವದೆಹಲಿ: ಪೇಟಿಎಂ ಆ್ಯಪ್ ಬಳಕೆದಾರರು ಆಯ್ದ ದೇಶಗಳಲ್ಲಿ ಯುಪಿಐ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ ಮಂಗಳವಾರ ತಿಳಿಸಿದೆ.
ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಸಿಂಗಪುರ, ಫ್ರಾನ್ಸ್, ಮಾರಿಷಷ್, ಭೂತಾನ್ ಮತ್ತು ನೇಪಾಳದಲ್ಲಿ ಪೇಟಿಎಂ ಆ್ಯಪ್ ಬಳಕೆದಾರರು ಶಾಪಿಂಗ್, ಹೋಟೆಲ್ ಸೇರಿ ನಗದು ರಹಿತ ಪಾವತಿ ಮಾಡಬಹುದಾಗಿದೆ. ವಿದೇಶಕ್ಕೆ ತೆರಳುವ ಬಳಕೆದಾರರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.