ADVERTISEMENT

ಎಚ್‌ಡಿಎಫ್‌ಸಿಯ 1.75 ಕೋಟಿ ಷೇರು ಖರೀದಿಸಿದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ

ಏಜೆನ್ಸೀಸ್
Published 12 ಏಪ್ರಿಲ್ 2020, 10:01 IST
Last Updated 12 ಏಪ್ರಿಲ್ 2020, 10:01 IST
ಎಚ್‌ಡಿಎಫ್‌ಸಿ
ಎಚ್‌ಡಿಎಫ್‌ಸಿ   

ಮುಂಬೈ: ಚೀನಾದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೌಸಿಂಗ್ ಡೆವಲಪ್‌ಮೆಂಟ್ ಫಿನಾನ್ಸ್ ಕಾರ್ಪರೇಷನ್‌ನ(ಎಚ್‌ಡಿಎಫ್‌ಸಿ)1.01 ರಷ್ಟು ಷೇರುಗಳ ಮೇಲೆ ಮಾಲೀಕತ್ವ ಹೊಂದಿದೆ. ಅಂದರೆ ಚೀನಾದ ಈ ಬ್ಯಾಂಕ್ ಎಚ್‌ಡಿಎಫ್‌ಸಿಯಸುಮಾರು 1.75 ಕೋಟಿ ಷೇರುಗಳನ್ನು ಖರೀದಿ ಮಾಡಿದೆ.

ಮಾರ್ಚ್ ತಿಂಗಳಲ್ಲಿ ಮುಗಿದ ತ್ರೈಮಾಸಿಕ ಅವಧಿಯಲ್ಲಿ ಚೀನಾ ಈ ಷೇರು ಖರೀದಿ ಮಾಡಿದೆ. ಎಚ್‌ಡಿಎಫ್‌ಸಿಯ ಷೇರು ಬೆಲೆ ಕುಸಿತ ಕಂಡ ಸಮಯದಲ್ಲೇ ಈ ಚಟುವಟಿಕೆ ನಡೆದಿದೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಒಂದು ತಿಂಗಳಲ್ಲಿ ಎಚ್‌ಡಿಎಫ್‌ಸಿಯ ಷೇರುಗಳ ಬೆಲೆ ಶೇ.25ಕ್ಕಿಂತಲೂ ಕಡಿಮೆಯಾಗಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಕಂಪನಿಯಲ್ಲಿ ಶೇ 70.88 ರಷ್ಟು ಪಾಲನ್ನು ಹೊಂದಿದ್ದು, ಇದು ಸಿಂಗಾಪುರ್ ಸರ್ಕಾರದ ಶೇ 3.23 ರಷ್ಟು ಷೇರುಗಳನ್ನು ಒಳಗೊಂಡಿದೆ.

ADVERTISEMENT

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಬಿಪಿ ಪಿಎಲ್ಸಿ ಮತ್ತು ರಾಯಲ್ ಡಚ್ ಶೆಲ್ ಪಿಎಲ್ಸಿ ಸೇರಿದಂತೆ ವಿಶ್ವದಾದ್ಯಂತದ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.