ADVERTISEMENT

ಬೆಂಗಳೂರಿನಲ್ಲಿ ₹100ರ ಸನಿಹಕ್ಕೆ ಡೀಸೆಲ್‌ ದರ

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್ ದರ 30 ಪೈಸೆ ಹೆಚ್ಚಳ

ಪಿಟಿಐ
Published 16 ಅಕ್ಟೋಬರ್ 2021, 16:27 IST
Last Updated 16 ಅಕ್ಟೋಬರ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಶನಿವಾರ ದೇಶದಾದ್ಯಂತ ಪೆಟ್ರೋಲ್‌,ಡೀಸೆಲ್‌ ದರವನ್ನು ಪ್ರತಿ ಲೀಟರಿಗೆ 35 ಪೈಸೆಗಳಷ್ಟು ಹೆಚ್ಚಿಸಿವೆ. ಇದರಿಂದಾಗಿ ಬೆಂಗಳೂರು, ಗೋವಾದಲ್ಲಿಡೀಸೆಲ್‌ ದರವು ಲೀಟರಿಗೆ ₹100ರಸನಿಹಕ್ಕೆಬಂದಿದೆ.

ಸತತ ಮೂರನೇ ಬಾರಿಗೆ ಇಂಧನದರಹೆಚ್ಚಿಸಲಾಗಿದೆ. ಅಕ್ಟೋಬರ್‌ 12 ಮತ್ತು 13ರಂದು ಬೆಲೆಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಶನಿವಾರದದರಏರಿಕೆಯಿಂದಡೀಸೆಲ್‌ ದರವು ಪ್ರತಿ ಲೀಟರಿಗೆ ₹ 99.97ಕ್ಕೆ ತಲುಪಿದೆ. ಪೆಟ್ರೋಲ್‌ದರಲೀಟರಿಗೆ ₹ 109.12ಕ್ಕೆ ತಲುಪಿದೆ.

ಪಣಜಿಯಲ್ಲಿಡೀಸೆಲ್‌ದರ₹ 99.56ಕ್ಕೆ ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ದರಲೀಟರಿಗೆ ₹ 105.49 ಮತ್ತು ಡೀಸೆಲ್‌ದರಲೀಟರಿಗೆ ₹ 94.22ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ದರ₹ 111.43 ಮತ್ತುಡೀಸೆಲ್‌ ದರ₹ 102.15ಕ್ಕೆ ಏರಿಕೆ ಆಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ಇಂಧನ ದರವುರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಆಗುತ್ತದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನದರ ಹೆಚ್ಚಿಸಲಾಗಿದೆ. ಸೆಪ್ಟೆಂಬರ್‌ನಿಂದ ಈವರೆಗೆ ಪೆಟ್ರೋಲ್‌ ದರವನ್ನು 15 ಬಾರಿ ಮತ್ತುಡೀಸೆಲ್‌ ದರವನ್ನು 18 ಬಾರಿ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ದರಲೀಟರಿಗೆ ₹ 4.30 ಮತ್ತುಡೀಸೆಲ್‌ದರಲೀಟರಿಗೆ
₹ 5.6ರಷ್ಟು ಹೆಚ್ಚಾಗಿದೆ.

ದೇಶದ ಹಲವು ಭಾಗಗಳಲ್ಲಿಪೆಟ್ರೋಲ್‌ ದರವು ಈಗಾಗಲೇ ಲೀಟರಿಗೆ ₹ 100ನ್ನು ದಾಟಿ ಮಾರಾಟವಾಗುತ್ತಿದೆ. ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌, ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಕೇರಳ ಮತ್ತು ಲಡಾಖ್‌ನಲ್ಲಿ ಸಹಡೀಸೆಲ್‌ದರಲೀಟರಿಗೆ ₹100ರಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.