ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಗುರುವಾರವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಮಾಡಿವೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 17 ಪೈಸೆ ಹಾಗೂ ಡೀಸೆಲ್ ದರ 21 ಪೈಸೆ ಹೆಚ್ಚಿಸಿವೆ. ಇದರಿಂದ ಚಿಲ್ಲರೆ ಮಾರಾಟ ದರ ಪೆಟ್ರೋಲ್ ₹ 85.41 ಹಾಗೂ ಡೀಸೆಲ್ ₹ 77.22ಕ್ಕೆ ತಲುಪಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 17 ಪೈಸೆ ಹೆಚ್ಚಾಗಿ ₹ 89.33ಕ್ಕೆ ಹಾಗೂ ಡೀಸೆಲ್ ದರ 20 ಪೈಸೆ ಹೆಚ್ಚಾಗಿ ₹ 79.42ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 82.49 ರಿಂದ ₹ 82.66ಕ್ಕೆ ಹಾಗೂ ಡೀಸೆಲ್ ದರ ₹ 72.65 ರಿಂದ ₹ 72.84ಕ್ಕೆ ಏರಿಕೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.