ADVERTISEMENT

ಎರಡು ತಿಂಗಳಲ್ಲಿ 40 ಬಾರಿ ಪೆಟ್ರೋಲ್ ದರ ಹೆಚ್ಚಳ!

ಪಿಟಿಐ
Published 15 ಜುಲೈ 2021, 11:01 IST
Last Updated 15 ಜುಲೈ 2021, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂರು ದಿನಗಳ ಬಿಡುವಿನ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಗುರುವಾರ ಇಂಧನ ದರ ಹೆಚ್ಚಿಸಿವೆ. ಪೆಟ್ರೋಲ್‌ ದರ ಲೀಟರಿಗೆ 35 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 15 ಪೈಸೆ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 105 ಮತ್ತು ಡೀಸೆಲ್‌ ದರ ಲೀಟರಿಗೆ ₹ 95.32ಕ್ಕೆ ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 101.54 ಮತ್ತು ಡೀಸೆಲ್ ದರ ಲೀಟರಿಗೆ ₹ 89.87ಕ್ಕೆ ತಲುಪಿದೆ.

ಮೇ 4ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ದರವನ್ನು ಒಟ್ಟಾರೆ 40 ಬಾರಿ ಮತ್ತು ಡೀಸೆಲ್‌ ದರವನ್ನು 37 ಬಾರಿ ಹೆಚ್ಚಿಸಲಾಗಿದೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಒಳಗೊಂಡು 15 ರಾಜ್ಯಗಳ ಬಹುತೇಕ ಕಡೆಗಳಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 100ರ ಗಡಿಯನ್ನು ದಾಟಿ ಮಾರಾಟವಾಗುತ್ತಿದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಡೀಸೆಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿ ಮಾರಾಟವಾಗುತ್ತಿದೆ.

ADVERTISEMENT

ಅಂಕಿ–ಅಂಶ

ಮೇ 4 ರಿಂದ ಈವರೆಗೆ ಪ್ರತಿ ಲೀಟರಿಗೆ ಆಗಿರುವ ಹೆಚ್ಚಳ

ಪೆಟ್ರೋಲ್;₹ 11.14

ಡೀಸೆಲ್‌;₹ 9.14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.