ADVERTISEMENT

6 ದಿನದಲ್ಲಿ ಪೆಟ್ರೋಲ್‌ ₹ 3.31 ತುಟ್ಟಿ

ಪಿಟಿಐ
Published 12 ಜೂನ್ 2020, 10:35 IST
Last Updated 12 ಜೂನ್ 2020, 10:35 IST
   

ನವದೆಹಲಿ: ಶುಕ್ರವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 57 ಪೈಸೆ ಮತ್ತು 59 ಪೈಸೆಯಂತೆ ಹೆಚ್ಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂಧನಗಳ ಮಾರಾಟ ಬೆಲೆ ಹೊಂದಾಣಿಕೆ ಮಾಡಲು ಸತತ 6ನೇ ದಿನವೂ ಬೆಲೆ ಏರಿಕೆ ಮಾಡಿವೆ. ಇದರಿಂದಾಗಿ ಪೆಟ್ರೋಲ್‌ ಬೆಲೆ ಭಾನುವಾರದಿಂದೀಚೆಗೆ ಪ್ರತಿ ಲೀಟರ್‌ಗೆ ₹ 3.31 ಮತ್ತು ಡೀಸೆಲ್‌ ₹ 3.42ರಂತೆ ತುಟ್ಟಿಯಾಗಿದೆ.

ಬೆಂಗಳೂರಿನಲ್ಲಿ ಈಗ ಪೆಟ್ರೋಲ್‌ ಬೆಲೆ ₹ 76.86 ಮತ್ತು ಡೀಸೆಲ್‌ ಬೆಲೆ ₹ 69.38ಕ್ಕೆ ತಲುಪಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.