ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಹೆಚ್ಚಳ

ಪಿಟಿಐ
Published 25 ಮೇ 2021, 16:17 IST
Last Updated 25 ಮೇ 2021, 16:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಮಂಗಳವಾರ ಪೆಟ್ರೋಲ್‌ ದರವನ್ನು ಲೀಟರಿಗೆ 23 ಪೈಸೆ, ಡೀಸೆಲ್‌ ದರವನ್ನು 25 ಪೈಸೆಯಷ್ಟು ಹೆಚ್ಚಿಸಿವೆ.

ಮೇ ತಿಂಗಳಿನಲ್ಲಿ 13 ಬಾರಿ ದರ ಹೆಚ್ಚಳ ಮಾಡಿದಂತಾಗಿದೆ. ಇದರಿಂದಾಗಿ ದೇಶದಾದ್ಯಂತ ಇಂಧನ ದರಗಳು ಗರಿಷ್ಠ ಮಟ್ಟ ತಲುಪಿವೆ. 13 ಬಾರಿಯ ಹೆಚ್ಚಳದ ಪರಿಣಾಮವಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 2.88 ಮತ್ತು ಡೀಸೆಲ್‌ ದರ ₹ 3.52ರಷ್ಟು ಹೆಚ್ಚಾಗಿದೆ. ಮಂಗಳವಾರ ಪೆಟ್ರೋಲ್ ದರ ಲೀಟರಿಗೆ ₹ 96.55 ಮತ್ತು ಡೀಸೆಲ್‌ ದರ ಲೀಟರಿಗೆ ₹ 89.39ಕ್ಕೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಲೀಟರಿಗೆ ₹ 93.44 ಮತ್ತು ಡೀಸೆಲ್‌ ಲೀಟರಿಗೆ ₹ 84.32ರಂತೆ ಮಾರಾಟವಾಗಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ₹ 100ರ ಗಡಿ ದಾಟಿದೆ. ಮುಂಬೈನಲ್ಲಿ ₹ 100ರ ಸಮೀಪ ಬಂದಿದೆ. ಮಂಗಳವಾರ ಪೆಟ್ರೋಲ್‌ ದರವು ₹ 99.71ಕ್ಕೆ ತಲುಪಿದೆ. ಡೀಸೆಲ್ ದರ ₹ 91.57ರಷ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.