ADVERTISEMENT

ಕಚ್ಚಾತೈಲ ದರ ಏರಿಕೆ: ಮೂರನೇ ದಿನವೂ ಇಂಧನ ದರ ಹೆಚ್ಚಳ

ಪಿಟಿಐ
Published 6 ಮೇ 2021, 11:32 IST
Last Updated 6 ಮೇ 2021, 11:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಸತತ ಮೂರನೇ ದಿನವೂ ಪೆಟ್ರೋಲ್‌, ಡೀಸೆಲ್ ದರ ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ 25 ಪೈಸೆ ಹೆಚ್ಚಾಗಿ ₹ 90.99ರಂತೆ ಹಾಗೂ ಡೀಸೆಲ್‌ ದರ 30 ಪೈಸೆ ಹೆಚ್ಚಾಗಿ ₹ 81.42ರಂತೆ ಮಾರಾಟವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 24 ಪೈಸೆ ಹೆಚ್ಚಾಗಿ ₹ 94.01ರಂತೆ ಹಾಗೂ ಡೀಸೆಲ್ ದರ 30 ಪೈಸೆ ಹೆಚ್ಚಾಗಿ 86.31ರಂತೆ ಮಾರಾಟವಾಗಿದೆ. ಮೂರು ದಿನಗಳಲ್ಲಿ ಪೆಟ್ರೋಲ್‌ ದರ 58 ಪೈಸೆ ಮತ್ತು ಡೀಸೆಲ್‌ ದರ 71 ಪೈಸೆ ಹೆಚ್ಚಾಗಿದೆ. ಸ್ಥಳೀಯ ಮಾರಾಟ ತೆರಿಗೆ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.