ADVERTISEMENT

ಪೆಟ್ರೋಲ್ ಬೆಲೆ ಏರಿಕೆ ಶೇ 5ರಷ್ಟು ಮಾತ್ರ: ಸಚಿವ ಹರದೀಪ್ ಸಿಂಗ್ ಪುರಿ

ಪಿಟಿಐ
Published 5 ಏಪ್ರಿಲ್ 2022, 13:48 IST
Last Updated 5 ಏಪ್ರಿಲ್ 2022, 13:48 IST
   

ನವದೆಹಲಿ (ಪಿಟಿಐ): ಅಭಿವೃದ್ಧಿ ಹೊಂದಿದ ಕೆಲವು ದೇಶಗಳು ರಷ್ಯಾ–ಉಕ್ರೇನ್ ಯುದ್ಧ ಶುರುವಾದ ನಂತರದಲ್ಲಿ ಪೆಟ್ರೋಲ್ ಬೆಲೆಯನ್ನು ಶೇಕಡ 50ಕ್ಕಿಂತ ಹೆಚ್ಚಿಸಿದ್ದರೂ, ಭಾರತದಲ್ಲಿ ಶೇ 5ರಷ್ಟು ಮಾತ್ರ ಹೆಚ್ಚಳ ಆಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮ ಅನುಭವಿಸುತ್ತಿರುವುದು ಭಾರತ ಮಾತ್ರವೇ ಅಲ್ಲ. ಇಡೀ ವಿಶ್ವ ಈ ಯುದ್ದದ ಪರಿಣಾಮ ಅನುಭವಿಸುತ್ತಿದೆ ಎಂದು ಅವರು ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.

ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ ಮತ್ತು ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆಯು ಶೇಕಡ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಯುದ್ಧ ಶುರುವಾದ ನಂತರದಲ್ಲಿ ನೈಸರ್ಗಿಕ ಅನಿಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.