ADVERTISEMENT

6 ವಾರಗಳಲ್ಲಿ ಪೆಟ್ರೋಲ್‌ ₹ 9.60 ಅಗ್ಗ: ಐಒಸಿ

ಪಿಟಿಐ
Published 29 ನವೆಂಬರ್ 2018, 20:24 IST
Last Updated 29 ನವೆಂಬರ್ 2018, 20:24 IST
   

ನವದೆಹಲಿ: ಆರು ವಾರಗಳಲ್ಲಿ ಪೆಟ್ರೋಲ್ ದರ ₹ 9.60 ಮತ್ತು ಡೀಸೆಲ್‌ ದರ ₹ 7.56 ಇಳಿಕೆ ಮಾಡಿರುವುದಾಗಿ ಇಂಡಿಯನ್‌ ಆಯಿಲ್‌ ಕಂಪನಿ (ಐಒಸಿ) ತಿಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ದರ ಇಳಿಕೆಗೆ ಅನುಗುಣವಾಗಿ ಇಂಧನ ದರಗಳನ್ನು ತಗ್ಗಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಗುರುವಾರ ಪ್ರತಿಲೀಟರ್‌ ಪೆಟ್ರೋಲ್‌ ದರ34 ಪೈಸೆ ಮತ್ತು ಡೀಸೆಲ್‌ ದರ 37 ಪೈಸೆ ಇಳಿಕೆಯಾಗಿದೆ. ಚಿಲ್ಲರೆ ಮಾರಾಟ ದರ ₹74.15ರಿಂದ ₹ 73.81ಕ್ಕೆ ಮತ್ತು ಡೀಸೆಲ್‌₹ 68.85ರಿಂದ ₹ 68.48ಕ್ಕೆ ಇಳಿಕೆಯಾಗಿದೆ. ಅಕ್ಟೋಬರ್‌ ತಿಂಗಳಿನಿಂದೀಚೆಗೆ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹10.59 ಹಾಗೂ ಡೀಸೆಲ್‌ ₹ 7 ಕಡಿಮೆಯಾಗಿದೆ.

ADVERTISEMENT

ಲ್‌ಪಿಜಿ ದರ ತಗ್ಗಲಿದೆ: ಕಚ್ಚಾ ತೈಲ ದರ ಇಳಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ದರವೂ (ಎಲ್‌ಪಿಜಿ) ತಗ್ಗಲಿದೆ ಎಂದು ಐಒಸಿ ಸುಳಿವು ನೀಡಿದೆ. ಸದ್ಯಕ್ಕೆ ಸಬ್ಸಿಡಿ ಸಹಿತ ಸಿಲಿಂಡರ್ ದರ ₹ 507 ಮತ್ತು ಸಬ್ಸಿಡಿಯೇತರ ದರ ₹ 942 ಇದೆ.

ರೂಪಾಯಿ ಮೌಲ್ಯ ವೃದ್ಧಿ:ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರ77 ಪೈಸೆ ಹೆಚ್ಚಾಗಿ, ಮೂರು ತಿಂಗಳ ಗರಿಷ್ಠ ಮಟ್ಟವಾದ ಒಂದು ಡಾಲರ್‌ಗೆ₹ 69.85ಕ್ಕೆ ಏರಿಕೆಯಾಗಿದೆ.

ಕಚ್ಚಾ ತೈಲ ದರ ಇಳಿಕೆ ಹಾಗೂ ವಿದೇಶಿ ಬಂಡವಾಳ ಒಳಹರಿವಿನ ಪ್ರಭಾವದಿಂದಾಗಿ ರೂಪಾಯಿ ಚೇತರಿಸಿಕೊಂಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.