ADVERTISEMENT

ಆನ್‌ಲೈನ್‌ ಮೂಲಕ ಎನ್‌ಪಿಎಸ್‌ ಹಿಂತೆಗೆತ

ಪಿಟಿಐ
Published 30 ಡಿಸೆಂಬರ್ 2020, 16:33 IST
Last Updated 30 ಡಿಸೆಂಬರ್ 2020, 16:33 IST

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಹೊರಬರಲು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವ ಅವಕಾಶವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ನೀಡಿದೆ. ಈಗಿರುವ ವ್ಯವಸ್ಥೆಯಲ್ಲಿ ಎನ್‌ಪಿಎಸ್‌ ಚಂದಾದಾರರು, ಎನ್‌ಪಿಎಸ್‌ ಸೌಲಭ್ಯ ನೀಡಿರುವ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿತ್ತು.

‘ಇನ್ನು ಮುಂದೆ ಚಂದಾದಾರರು ಆನ್‌ಲೈನ್‌ ಮೂಲಕ ಹಣ ಹಿಂಪಡೆಯುವ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಒಟಿಪಿ ಅಥವಾ ಇ–ಸಹಿ ಮೂಲಕ ದೃಢೀಕರಿಸಬಹುದು’ ಎಂದು ಪಿಎಫ್‌ಆರ್‌ಡಿಎ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT