ADVERTISEMENT

ಫೋನ್‌ಪೇ: ಎಐ ಚಾಲಿತ ಸೌಲಭ್ಯ ಬಿಡುಗಡೆ

ಪಿಟಿಐ
Published 21 ಫೆಬ್ರುವರಿ 2026, 16:29 IST
Last Updated 21 ಫೆಬ್ರುವರಿ 2026, 16:29 IST
_
_   

ನವದೆಹಲಿ: ಮೈಕ್ರೋಸಾಫ್ಟ್‌ ಫೌಂಡ್ರಿ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಹುಡುಕಾಟ ಸೌಲಭ್ಯವನ್ನು ಫೋನ್‌ಪೇ ಶನಿವಾರ ಬಿಡುಗಡೆ ಮಾಡಿದೆ. ಇದರ ಮೂಲಕ, ಬಳಕೆದಾರರು ‘ಸಹಜವಾಗಿ ಆಡುವ ಭಾಷೆ’ಯಲ್ಲೆ ಧ್ವನಿ ಅಥವಾ ಪಠ್ಯಗಳ ಆಜ್ಞೆ ನೀಡಿ ಹಣ ಪಾವತಿಸಬಹುದು ಅಥವಾ ಹಳೆಯ ವ್ಯವಹಾರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.

‘ಈ ಸೌಲಭ್ಯ ಆ್ಯಪ್ ಬಳಕೆಯನ್ನು ಹೆಚ್ಚು ಸರಳವಾಗಿಸುತ್ತದೆ ಮತ್ತು ಪ್ರತಿಯೊಬ್ಬ ಬಳಕೆದಾರರಿಗೂ ಅವರ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಅನುಭವ ನೀಡುತ್ತದೆ.‌ ಇದು ಹಿಂದಿನ ಮೆನುಗಳ ಬದಲಾಗಿ ಬಳಕೆದಾರರ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುತ್ತದೆ. ಇದರಿಂದಾಗಿ ಆ್ಯಪ್‌ನಲ್ಲಿ ಸಂವಾದಗಳ ಮೂಲಕವೇ ಕೆಲಸಗಳನ್ನು ಮುಗಿಸಬಹುದು’ ಎಂದು ಫೋನ್‌ಪೇ ತಿಳಿಸಿದೆ.

ಉದಾಹರಣೆಗೆ, ‘ಹೇಮಂತ್‌ಗೆ ₹20 ಪಾವತಿಸು’ ಎಂದರೆ ಹಣ ಕಳುಹಿಸುವ ಪುಟ ಸ್ವಯಂಚಾಲಿತವಾಗಿ ತೆರೆದು ಸಂಬಂಧಿತ ಸಂಪರ್ಕಗಳನ್ನು ಪ್ರದರ್ಶಿಸುತ್ತದೆ. ‘ರೀಚಾರ್ಜ್ ಫಾಸ್ಟ್‌ಟ್ಯಾಗ್’ ಅಥವಾ ‘ಚಿನ್ನದ ಬೆಲೆ’ ಎಂದರೆ ಬಳಕೆದಾರರನ್ನು ಆ್ಯಪ್ ಸೂಕ್ತವಾದ ಪೇಜ್‌ಗೆ ಕೊಂಡೊಯ್ಯುತ್ತದೆ.

ADVERTISEMENT

ಈ ಸೌಲಭ್ಯ ಕೇವಲ ಹುಡುಕಾಟಕ್ಕೆ ಮಾತ್ರವಲ್ಲದೆ, ಹಣ ‍ಪಾವತಿ, ಖರೀದಿ ಅಥವಾ ಸಹಾಯ ಪಡೆಯುವುದು ಸೇರಿದಂತೆ ಬಳಕೆದಾರರ ಉದ್ದೇಶ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತದೆ. ಇದು ಆ್ಯಪ್‌ನ ಒಳಗಿನ ಮತ್ತು ಕ್ಲೌಡ್‌ ತಂತ್ರಜ್ಞಾನ ಎರಡನ್ನೂ ಬಳಸುತ್ತದೆ. ಆದರೆ, ಮುಖ್ಯವಾಗಿ ಬಳಕೆದಾರರ ಯಾವುದೇ ವೈಯಕ್ತಿಕ ಅಥವಾ ವ್ಯವಹಾರದ ಮಾಹಿತಿ ಹೊರಗೆ ಹೋಗದಂತೆ ಸುರಕ್ಷತೆ ವಹಿಸುತ್ತದೆ ಎಂದು ಕಂಪನಿಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.