ನವದೆಹಲಿ: ಇಲ್ಲಿನ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಾಗತಿಕ ಜವಳಿ ಮೇಳವಾದ ‘ಭಾರತ್ ಟೆಕ್ಸ್ 2025’ರಲ್ಲಿ ಜಪಾನ್, ಯುಎಇ, ಇರಾನ್, ಅಮೆರಿಕ, ಸ್ಪೇನ್, ಬ್ರಿಟನ್ ಸೇರಿ 110ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿವೆ ಎಂದು ಸಿದ್ಧಉಡುಪು ರಫ್ತು ಉತ್ತೇಜನ ಮಂಡಳಿ (ಎಇಪಿಸಿ) ತಿಳಿಸಿದೆ.
ಫೆಬ್ರುವರಿ 17ರ ವರೆಗೆ ಮೇಳ ನಡೆಯಲಿದೆ. ಜಾಗತಿಕ ಮಟ್ಟದ ನೀತಿ ನಿರೂಪಕರಾದ ವಿವಿಧ ಕಂಪನಿಯ ಸಿಇಒಗಳು, 5 ಸಾವಿರ ಪ್ರದರ್ಶಕರು, 6 ಸಾವಿರಕ್ಕೂ ಹೆಚ್ಚು ಅಂತರರಾಷ್ಟ್ರೀಯ ಖರೀದಿದಾರರು, 120ಕ್ಕೂ ಹೆಚ್ಚು ರಾಷ್ಟ್ರಗಳ ಸಂದರ್ಶಕರು ಪಾಲ್ಗೊಂಡಿದ್ದಾರೆ ಎಂದು ಎಇಪಿಸಿ ಅಧ್ಯಕ್ಷ ಸುಧೀರ್ ಸೆಖ್ರಿ ಶನಿವಾರ ತಿಳಿಸಿದ್ದಾರೆ.
ಫೆಬ್ರುವರಿ 17ರ ವರೆಗೆ ನಡೆಯಲಿರುವ ಈ ಮೇಳದಲ್ಲಿ ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧಉಡುಪುಗಳ ವರೆಗೆ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಲಭಿಸಲಿವೆ. ದೇಶದ ಜವಳಿ ವಲಯದಿಂದ ನಡೆಯುತ್ತಿರುವ ಅತಿದೊಡ್ಡ ಮೇಳ ಇದಾಗಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಮಟ್ಟದ ಪ್ರಮುಖ ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ಮಾರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮೇಳಕ್ಕೆ ಭೇಟಿ ನೀಡಲಿದ್ದು, ಭಾಷಣ ಮಾಡಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.