ADVERTISEMENT

ಕೊಚ್ಚಿ–ಮಂಗಳೂರು ಅನಿಲ ಕೊಳವೆಮಾರ್ಗ: 5ರಂದು ಪ್ರಧಾನಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 11:30 IST
Last Updated 2 ಜನವರಿ 2021, 11:30 IST
ಗೇಲ್‌ ಇಂಡಿಯಾ ಕಂಪನಿಯ ನಿರ್ದೇಶಕ ಎಂ.ವಿ. ಐಯ್ಯರ್, ಅಧ್ಯಕ್ಷ ಮನೋಜ್ ಜೈನ್‌ ಹಾಗೂ ಮಾರುಕಟ್ಟೆ ವಿಭಾಗದ ನಿರ್ದೇಶಕ ಇ.ಎಸ್‌. ರಂಗನಾಥನ್‌ ಅವರು ವರ್ಚುವಲ್‌ ಸುದ್ದಿಗೋಷ್ಠಿ ನಡೆಸಿದರು
ಗೇಲ್‌ ಇಂಡಿಯಾ ಕಂಪನಿಯ ನಿರ್ದೇಶಕ ಎಂ.ವಿ. ಐಯ್ಯರ್, ಅಧ್ಯಕ್ಷ ಮನೋಜ್ ಜೈನ್‌ ಹಾಗೂ ಮಾರುಕಟ್ಟೆ ವಿಭಾಗದ ನಿರ್ದೇಶಕ ಇ.ಎಸ್‌. ರಂಗನಾಥನ್‌ ಅವರು ವರ್ಚುವಲ್‌ ಸುದ್ದಿಗೋಷ್ಠಿ ನಡೆಸಿದರು   

ನವದೆಹಲಿ: ‘ಕೊಚ್ಚಿ–ಮಂಗಳೂರು ನೈಸರ್ಗಿಕಅನಿಲ ಕೊಳವೆ ಮಾರ್ಗದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 5ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಿದ್ದಾರೆ’ ಎಂದು ಗೇಲ್‌ ಇಂಡಿಯಾದ ಅಧ್ಯಕ್ಷ ಮನೋಜ್‌ ಜೈನ್‌ ಅವರು ಶನಿವಾರ ಮಾಹಿತಿ ನೀಡಿದರು.

ಕರ್ನಾಟಕ ಮತ್ತು ಕೇರಳ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೇರಳದ ಕೊಚ್ಚಿಯಿಂದ ದಕ್ಷಿಣ ಕನ್ನಡದ ಮಂಗಳೂರಿನವರೆಗೆ ಸಂರ್ಪಕ ಕಲ್ಪಿಸುವ 450 ಕಿ.ಮೀ. ಉದ್ದದ ಗ್ಯಾಸ್‌ ಪೈಪ್‌ಲೈನ್ ಯೋಜನೆ ಇದಾಗಿದೆ. ಕೇರಳದ ಎರ್ನಾಕುಳಂ, ತ್ರಿಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕೊಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಮಾರ್ಗವಾಗಿ ಮಂಗಳೂರಿನವರೆಗೆ ಅನಿಲ ಪೂರೈಕೆಯಾಗಲಿದೆ’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.