ADVERTISEMENT

ಒಂದೇ ವರ್ಷದಲ್ಲಿ ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧ ಮಾರಾಟ

ಪಿಟಿಐ
Published 20 ಡಿಸೆಂಬರ್ 2023, 16:07 IST
Last Updated 20 ಡಿಸೆಂಬರ್ 2023, 16:07 IST
<div class="paragraphs"><p>ಜನೌಷಧಿ ಕೇಂದ್ರ</p></div>

ಜನೌಷಧಿ ಕೇಂದ್ರ

   

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ₹1 ಸಾವಿರ ಕೋಟಿ ಮೌಲ್ಯದ ಜೆನೆರಿಕ್‌ ಔಷಧಗಳನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ದೇಶದ 785 ಜಿಲ್ಲೆಗಳಲ್ಲಿ ಇರುವ ಜೆನೆರಿಕ್‌ ಕೇಂದ್ರಗಳಲ್ಲಿ ಔಷಧ ಖರೀದಿಸುವ ಮೂಲಕ ಜನರು ಈ ವರ್ಷದಲ್ಲಿ ಸುಮಾರು ₹5 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ತಿಳಿಸಿದೆ.

ADVERTISEMENT

2014ರಲ್ಲಿ ದೇಶದಲ್ಲಿ ಕೇವಲ 80 ಕೇಂದ್ರಗಳಿದ್ದವು. ಸದ್ಯ ಇವುಗಳ ಸಂಖ್ಯೆ 10 ಸಾವಿರಕ್ಕೇರಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಈ ಯೋಜನೆಯಡಿ ಔಷಧ ಖರೀದಿಸುವ ಮೂಲಕ ಜನರು ₹25 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ವಿವರಿಸಿದೆ.

2026ರ ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ ಜೆನೆರಿಕ್‌ ಕೇಂದ್ರಗಳ ಸಂಖ್ಯೆಯನ್ನು 25 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೊಸ ಕೇಂದ್ರಗಳ ಸ್ಥಾಪನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನೂ ಆಹ್ವಾನಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.