ನವದೆಹಲಿ: ದೇಶದ ಎಲ್ಲಾ ಅಂಚೆ ಕಚೇರಿಗಳು ಆಗಸ್ಟ್‌ನಿಂದ ಡಿಜಿಟಲ್ ಪಾವತಿ ಸ್ವೀಕರಿಸುವುದನ್ನು ಆರಂಭಿಸಲಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.
ಪ್ರಸ್ತುತ ಅಂಚೆ ಕಚೇರಿಗಳು ತಮ್ಮ ಖಾತೆಗಳನ್ನು ಯುಪಿಐ ವ್ಯವಸ್ಥೆಯೊಂದಿಗೆ ಜೋಡಣೆ ಮಾಡದ ಕಾರಣ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಈಗ ಅಂಚೆ ಕಚೇರಿಗಳು ತಮ್ಮ ಐ.ಟಿ ವ್ಯವಸ್ಥೆಯಲ್ಲಿ ಹೊಸ ಅಪ್ಲಿಕೇಷನ್ ಅನ್ನು ಅಳವಡಿಸಿದ ಬಳಿಕ ಕೌಂಟರ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸಿ ವಹಿವಾಟು ನಡೆಸಬಹುದಾಗಿರುತ್ತದೆ. ಇದು ಆಗಸ್ಟ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿವೆ.
ಯೋಜನೆಯ ಪ್ರಾಯೋಗಿಕ ಭಾಗವಾಗಿ ಕರ್ನಾಟಕ ವೃತ್ತದ ಮೈಸೂರು ಮತ್ತು ಬಾಗಲಕೋಟೆಯ ಪ್ರಧಾನ ಕಚೇರಿ ಹಾಗೂ ಅದರ ಅಧೀನ ಕಚೇರಿಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.