ADVERTISEMENT

ವಿದ್ಯುತ್ ಬಳಕೆ ಶೇ 6ರಷ್ಟು ಇಳಿಕೆ

ಪಿಟಿಐ
Published 1 ನವೆಂಬರ್ 2025, 14:53 IST
Last Updated 1 ನವೆಂಬರ್ 2025, 14:53 IST
ವಿದ್ಯುತ್‌ ದರ: ಶೇ 6ರಷ್ಟು ಏರಿಕೆ
ವಿದ್ಯುತ್‌ ದರ: ಶೇ 6ರಷ್ಟು ಏರಿಕೆ   

ನವದೆಹಲಿ: ದೇಶದಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಅಕ್ಟೋಬರ್‌ ತಿಂಗಳಿನಲ್ಲಿ ಶೇ 6ರಷ್ಟು ಇಳಿಕೆಯಾಗಿದೆ.

ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ 14,047 ಕೋಟಿ ಯೂನಿಟ್‌ ವಿದ್ಯುತ್ ಬಳಕೆ ಆಗಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ 13,200 ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ದೇಶದ ಕೆಲವು ಭಾಗಗಳಲ್ಲಿ ಅಕ್ಟೋಬರ್‌ನಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಚಳಿಗಾಲದ ಆರಂಭದಿಂದಾಗಿ ತಾಪಮಾನ ನಿಯಂತ್ರಣದಲ್ಲಿತ್ತು. ಇದರಿಂದ ಹವಾ ನಿಯಂತ್ರಕಗಳು, ಕೂಲರ್ಸ್‌ಗಳ ಬಳಕೆಯಲ್ಲಿ ಕಡಿಮೆ ಆಗಿದ್ದರಿಂದ, ವಿದ್ಯುತ್‌ ಬಳಕೆ ಇಳಿದಿದೆ ಎಂದು ವಲಯದ ತಜ್ಞರು ಹೇಳಿದ್ದಾರೆ.

ADVERTISEMENT

ಅಕ್ಟೋಬರ್‌ನಲ್ಲಿ ಗರಿಷ್ಠ ವಿದ್ಯುತ್‌ ಬೇಡಿಕೆ 210.71 ಗಿಗಾವಾಟ್‌ ಆಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 219.22 ಗಿಗಾವಾಟ್‌ ವಿದ್ಯುತ್ ಬೇಡಿಕೆ ಇತ್ತು. 2024ರ ಮೇ ತಿಂಗಳಲ್ಲಿ ವಿದ್ಯುತ್‌ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 250 ಗಿಗಾವಾಟ್‌ಗೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.