ADVERTISEMENT

ಎಎಎಐ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 11:24 IST
Last Updated 30 ನವೆಂಬರ್ 2022, 11:24 IST
ಪ್ರಶಾಂತ್ ಕುಮಾರ್
ಪ್ರಶಾಂತ್ ಕುಮಾರ್   

ಬೆಂಗಳೂರು: ಗ್ರೂಪ್‌ಎಂ ಮೀಡಿಯಾ (ಇಂಡಿಯಾ) ಪ್ರೈ.ಲಿ. ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ್ ಕುಮಾರ್ ಅವರು ಭಾರತೀಯ ಜಾಹೀರಾತು ಏಜೆನ್ಸಿಗಳ ಒಕ್ಕೂಟದ (ಎಎಎಐ) 2022–23ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ನವೆಂಬರ್ 28ರಂದು ಮುಂಬೈನಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಕುಮಾರ್ ಅವರ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ. ಹವಸ್ ಗ್ರೂಪ್ ಇಂಡಿಯಾದ ಗ್ರೂಪ್‌ ಸಿಇಒ ರಾಣಾ ಬರುವಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಒಕ್ಕೂಟದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಒಂದು ಗೌರವ’ ಎಂದು ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರ್ ಅವರು ಎಎಎಐ ಉಪಾಧ್ಯಕ್ಷರಾಗಿ 2020ರಿಂದ 2022ರವರೆಗೆ ಕರ್ತವ್ಯ ನಿಭಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.