ADVERTISEMENT

NSC ಬಡ್ಡಿಯಲ್ಲಿ ತೆರಿಗೆ ವಿನಾಯ್ತಿ ಇದೆಯೇ?

ಯು.ಪಿ.ಪುರಾಣಿಕ್
Published 5 ಮಾರ್ಚ್ 2019, 19:30 IST
Last Updated 5 ಮಾರ್ಚ್ 2019, 19:30 IST
   

ವಿನಾಯಕ ಪ್ರಸಾದ. ಊರು ಬೇಡ
ನಾನು ಕೇಂದ್ರ ಸರ್ಕಾರದ ನೌಕರ. ತೆರಿಗೆ, ಗೃಹ ಸಾಲದ ಕಂತು, ನನ್ನ ಖರ್ಚು ಕಳೆದು ತಿಂಗಳಿಗೆ ₹ 8000 ಉಳಿಯುತ್ತದೆ. ಈ ಹಣ VPF-PLI-MF ಅಥವಾ ಬೇರೆ ಎಲ್ಲಿ ತೊಡಗಿಸಲಿ.

ಉತ್ತರ: ನೀವು ಉಳಿಸಬಹುದಾದ ₹ 8000 VPF ಅಥವಾ R.D.ಯಲ್ಲಿ ಉಳಿಸಿ.VPF ಒಂದು ದೀರ್ಘಾವಧಿ ಹೂಡಿಕೆ ಹಾಗೂ ಜೀವನದ ಸಂಜೆಯಲ್ಲಿ ನಿಮಗೆ ಒಂದು ದೊಡ್ಡ ಮೊತ್ತ ದೊರೆಯುತ್ತದೆ. ಇಲ್ಲಿ ಹೂಡುವ ಹಣದ ಬಡ್ಡಿಗೆ ತೆರಿಗೆ ಕೂಡಾ ಇಲ್ಲ. ಆರ್.ಡಿ. ಅಲ್ಪಾವಧಿಗೂ ಮಾಡಬಹುದು, ನಿಮಗೆ ಅಂತಹ ಖರ್ಚು ಬಾರದಿರುವಲ್ಲಿVPF ಮಾಡಿ.

***
ಡಾ. ಉಮಾಶಂಕರ್, ನಾಗಮಂಗಲ
NSC ಬಡ್ಡಿಯಲ್ಲಿ ತೆರಿಗೆ ವಿನಾಯ್ತಿ ಇದೆಯೇ? ನನಗೆ 2019–20ರ ಹಣಕಾಸು ವರ್ಷದಲ್ಲಿ ₹ 2 ಲಕ್ಷ ಬಡ್ಡಿ ಬರಲಿದೆ. ಈ ಬಡ್ಡಿ ಯಾವ ಸೆಕ್ಷನ್‌ ಅಡಿಯಲ್ಲಿ ಪಡೆಯಲಿ?

ADVERTISEMENT

ಉತ್ತರ: NSC ಬಡ್ಡಿಗೆ ತೆರಿಗೆ ವಿನಾಯ್ತಿ ಇರುವುದಿಲ್ಲವಾದರೂ, ಇಲ್ಲಿ ಬರುವ ಬಡ್ಡಿಯನ್ನು ಸೆಕ್ಷನ್ 80C ಆಧಾರದ ಮೇಲೆ ಹೂಡಿಕೆ ಎಂದು ಪರಿಗಣಿಸಿ ಗರಿಷ್ಠ₹ 1.50 ಲಕ್ಷ ಮಿತಿಯೊಳಗೆ ವಿನಾಯ್ತಿ ಪಡೆಯಬಹುದು.

ಉದಾ: ನೀವು₹ 2 ಲಕ್ಷ ಬಡ್ಡಿ ಪಡೆಯುವಲ್ಲಿ₹ 1.50 ಲಕ್ಷಗಳ ತನಕ80C ಆಧಾರದ ಮೇಲೆ ರಿಯಾಯ್ತಿ ಪಡೆಯಬಹುದು. ವಿ.ಸೂ:80C ಅಡಿಯಲ್ಲಿ ನೀವು ಬೇರೆ ಹೂಡಿಕೆ ಮಾಡಿದ್ದರೆ, NSC ಬಡ್ಡಿ ಸೇರಿಸಿ, ಪಡೆಯುವಗರಿಷ್ಠ ವಿನಾಯ್ತಿ
₹ 1.50 ಲಕ್ಷ ಮಾತ್ರ.

***
ಕೃಷ್ಣ ಶರ್ಮಾ, ಮೈಸೂರು
ನನ್ನ ತಂದೆ ಕೇಂದ್ರ ಸರ್ಕಾರದ ನೌಕರರಾಗಿದ್ದು ಕಳೆದ ವರ್ಷ ತೀರಿಕೊಂಡರು. ನಾವು ಅವರ ಹೆಸರಿನಲ್ಲಿ I.T. Return ತುಂಬಲು ಸಲಹೆ ಮಾಡಿ.

ಉತ್ತರ: ನಿಮ್ಮ ತಂದೆ ಮರಣಾನಂತರ ಅವರು ಪಡೆದ ಸಂಬಳ ಹಾಗೂ ಕಡಿತ ಪರಿಗಣಿಸಿ I.T. Return ತುಂಬುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ತಂದೆಯವರು ಆರ್ಥಿಕ ವರ್ಷದಲ್ಲಿ ಏಪ್ರಿಲ್ ಒಂದು ತಿಂಗಳು ಹಾಗೂ ಮೇ 9 ಹೀಗೆ ಬರೇ 39 ದಿವಸದ ಸಂಬಳಕ್ಕೆ ಅರ್ಹರಾಗಿದ್ದು, ಹೀಗೆ ಬರುವ ಮೊತ್ತಕ್ಕೆ ಆದಾಯ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಪ್ರಮೇಯವೂ ಇಲ್ಲ. ಹಿಂದಿನ ವರ್ಷದ ವಿಚಾರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅವರ ಬಳಿ ವಿಚಾರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.