ADVERTISEMENT

ಭರ್ತಿ ಮಾಡಿದ ಜಿಎಸ್‌ಟಿಆರ್–3ಬಿ ಶೀಘ್ರ ಲಭ್ಯ

ಪಿಟಿಐ
Published 21 ಸೆಪ್ಟೆಂಬರ್ 2020, 11:53 IST
Last Updated 21 ಸೆಪ್ಟೆಂಬರ್ 2020, 11:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿಯಲ್ಲಿ ನೋಂದಾಯಿತ ಉದ್ದಿಮೆಗಳಿಗೆ ಮುಂಚಿತವಾಗಿಯೇ ಭರ್ತಿ ಮಾಡಿರುವ ಜಿಎಸ್‌ಟಿಆರ್‌–3ಬಿ ಅರ್ಜಿ ನಮೂನೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಜಿಎಸ್‌ಟಿ ನೆಟ್‌ವರ್ಕ್‌ನ ಸಿಇಒ ಪ್ರಕಾಶ್‌ ಕುಮಾರ್‌ ಸೋಮವಾರ ತಿಳಿಸಿದ್ದಾರೆ.

ತೆರಿಗೆ ಪಾವತಿ ಸುಲಭವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಾರಾಟಕ್ಕೆ ಸಂಬಂಧಿಸಿದ ಮಾಹಿತಿ ಇರುವ ‘ಜಿಎಸ್‌ಟಿಆರ್‌–1’ ಅರ್ಜಿ ನಮೂನೆಯ ಆಧಾರದ ಮೇಲೆ ಪೂರೈಕೆಯ ಮಾಹಿತಿ ಇರುವ ಜಿಎಸ್‌ಟಿಆರ್‌–3ಬಿಯನ್ನು ಪಿಡಿಎಫ್‌ ನಮೂನೆಯಲ್ಲಿ ನೀಡಲಾಗುತ್ತಿದೆ. ಈ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪೂರೈಕೆದಾರ ನೀಡುವ ಮಾಹಿತಿ ಆಧರಿಸಿ ಸ್ವಯಂ ಚಾಲಿತವಾಗಿ ಸಿದ್ಧವಾಗುವ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ (ಐಟಿಸಿ) ಇನ್‌ವಾಯ್ಸ್‌ ನೀಡಲಾಗುತ್ತದೆ. ಇದರಿಂದ ತೆರಿಗೆಪಾವತಿದಾರನಿಗೆ ಎಷ್ಟು ಐಟಿಸಿ ಲಭ್ಯವಿದೆ ಎನ್ನುವುದು ತಿಳಿಯಲಿದೆ.

ADVERTISEMENT

ಸದ್ಯ, ಬಾಧ್ಯತೆ ಮತ್ತು ಐಟಿಸಿಯನ್ನು ಪ್ರತ್ಯೇಕವಾದ ಪಿಡಿಎಫ್‌ನಲ್ಲಿ ನೀಡಲಾಗುತ್ತಿದೆ. ಎರಡು ತಿಂಗಳ ಬಳಿಕ ಅವೆರಡೂ ಜಿಎಸ್‌ಟಿಆರ್‌–3ಬಿ ರಿಟರ್ನ್ಸ್‌ನಲ್ಲಿ ಅಡಕವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.