ADVERTISEMENT

ಪ್ರೆಸ್ಟೀಜ್‌ನಿಂದ ಶುಭ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 4:33 IST
Last Updated 6 ನವೆಂಬರ್ 2020, 4:33 IST

ಬೆಂಗಳೂರು: ದೀಪಾವಳಿ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ‘ಶುಭ ಉತ್ಸವ’ ಅಭಿಯಾನ ಆರಂಭಿಸಿರುವ ಟಿಟಿಕೆ ಪ್ರೆಸ್ಟೀಜ್ ಕಂಪನಿಯು, ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದೆ. ಕಂಪನಿಯ ಕೆಲವು ಉತ್ಪನ್ನಗಳ ಖರೀದಿಗೆ ಗರಿಷ್ಠ ಶೇಕಡ 45ರವರೆಗೆ ರಿಯಾಯಿತಿ ಇದೆ.

ಸಣ್ಣ ಉಪಕರಣಗಳ ಖರೀದಿಯ ಮೇಲೆ ಶೇಕಡ 20ರಷ್ಟು ರಿಯಾಯಿತಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಈ ಕೊಡುಗೆಗಳು ನವೆಂಬರ್ 28ರವರೆಗೆ ಚಾಲ್ತಿಯಲ್ಲಿ ಇರುತ್ತವೆ. ₹ 10,895 ಬೆಲೆಯ ಗ್ಯಾಸ್ ಸ್ಟವ್ ಖರೀದಿಸಿದರೆ₹ 5,050 ಮೌಲ್ಯದ ವಸ್ತುಗಳು ಉಚಿತವಾಗಿ ಸಿಗಲಿವೆ. ‘ಶುಭ ಉತ್ಸವ’ ಕೊಡುಗೆ ಗಳು ಪ್ರೆಸ್ಟೀಜ್‌ನ ಎಲ್ಲ ಅಂಗಡಿಗಳಲ್ಲೂ ಲಭ್ಯವಿವೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT