ನವದೆಹಲಿ: ‘ದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬು ಬಾಕಿ ಮೊತ್ತ ಪಾವತಿಯಲ್ಲಿ ಶೇ 99ರಷ್ಟು ಗುರಿ ಸಾಧನೆಯಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ‘₹1.15 ಲಕ್ಷ ಕೋಟಿ ಬಾಕಿ ಮೊತ್ತದ ಪೈಕಿ ₹1.14 ಲಕ್ಷ ಕೋಟಿಯನ್ನು ಪಾವತಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಿದೆ. ಸಹಕಾರ ವಲಯದಲ್ಲಿರುವ ಕಾರ್ಖಾನೆಗಳು ಲಾಭದಲ್ಲಿದ್ದು, ಅಲ್ಲಿನ ನೌಕರರಿಗೆ ಉದ್ಯೋಗದ ಭದ್ರತೆ ಸಿಕ್ಕಿದೆ’ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಮೂರು ಕಾರ್ಖಾನೆಗಳಿಂದ ರೈತರಿಗೆ ₹516 ಕೋಟಿ ಬಾಕಿ ಪಾವತಿಯಾಗಿಲ್ಲ. ಆ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.