ADVERTISEMENT

ವೃತ್ತಿಪರರ ವರಮಾನ, ಉಳಿತಾಯ ಹೆಚ್ಚಳ

ಲಿಂಕ್ಡ್‌ಇನ್‌ ಸಮೀಕ್ಷೆ

ಪಿಟಿಐ
Published 30 ಜೂನ್ 2020, 21:19 IST
Last Updated 30 ಜೂನ್ 2020, 21:19 IST
ವೃತ್ತಿಪರರು
ವೃತ್ತಿಪರರು   

ನವದೆಹಲಿ: ದೇಶದ ವೃತ್ತಿಪರರು ತಮ್ಮ ವರಮಾನ ಮತ್ತು ಉಳಿತಾಯದ ಬಗ್ಗೆ ಹೊಂದಿರುವ ಸಕಾರಾತ್ಮಕ ಭಾವನೆಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಲಿಂಕ್ಡ್‌ಇನ್‌ ಹೇಳಿದೆ.

ಮೇ 4 ರಿಂದ 17ರವರೆಗೆ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ, ವರಮಾನ ಮತ್ತು ಉಳಿತಾಯದ ಬಗ್ಗೆವೃತ್ತಿಪರರು ಹೊಂದಿರುವ ಸಕಾರಾತ್ಮಕ ಭಾವನೆಯು ತುಸು ಹೆಚ್ಚಾಗಿದೆ ಎನ್ನುವುದುಜೂನ್‌ 1 ರಿಂದ 14ರವರೆಗೆ ನಡೆಸಿದ ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ ಎಂದು ತಿಳಿಸಿದೆ.

ಮುಂದಿನ ಆರು ತಿಂಗಳಿನಲ್ಲಿ ತಮ್ಮ ವರಮಾನ, ವೈಯಕ್ತಿಕ ವೆಚ್ಚ ಮತ್ತು ಉಳಿತಾಯವು ಹೆಚ್ಚಾಗಲಿದೆ ಎನ್ನುವುದು ನಾಲ್ವರು ವೃತ್ತಿಪರರಲ್ಲಿ ಒಬ್ಬರ ಅಭಿಪ್ರಾಯವಾಗಿದೆ.

ADVERTISEMENT

1,351 ವೃತ್ತಿಪರರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. ವರಮಾನ ಮತ್ತು ವೈಯಕ್ತಿಕ ವೆಚ್ಚವು ಹೆಚ್ಚಾಗಲಿದೆ ಎಂದು ನಾಲ್ವರಲ್ಲಿ ಒಬ್ಬರು ಹೇಳಿದ್ದು, ತಮ್ಮ ವೈಯಕ್ತಿಕ ಉಳಿತಾಯ ಮತ್ತು ಪಾವತಿಸಲೇಬೇಕಾದ ವ್ಯಕ್ತಿಗತ ಸಾಲಗಳೂ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರಿಸಿರುವುದರಿಂದಲೇ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಶೇ 55ರಷ್ಟು ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ.

ಕೆಲಸ ಮಾಡುವ ಸ್ಥಳವು ವಿಶಾಲವಾಗಿ ಇಲ್ಲದೇ ಇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ‌ಕೆಲಸಕ್ಕೆ ಹಿಂದಿರುಗಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯವೂ ಸಮೀಕ್ಷೆಯಿಂದ ತಿಳಿದುಬಂದಿದೆ.

ಸಮೀಕ್ಷೆಯ ವಿವರ

50%: ಕಾರ್ಪೊರೇಟ್ ಸೇವಾ ವೃತ್ತಿಪರರು

46%:ತಯಾರಿಕಾ ವಲಯದ ವೃತ್ತಿಪರರು

41%:ಶಿಕ್ಷಣ ಕ್ಷೇತ್ರದ ವೃತ್ತಿಪರರು

***

38%:ಅವಕಾಶ ಸಿಕ್ಕರೆ ಕೆಲಸ ಮಾಡುವ ಸ್ಥಳಕ್ಕೆ ಹಿಂದಿರುಗಲು ಸಿದ್ಧವಾಗಿರುವವರು

ಮೂವರಲ್ಲಿ ಒಬ್ಬರು

ಸುರಕ್ಷತಾ ಭಾವನೆ ಮೂಡುವವರೆಗೂ ಮನೆಯಲ್ಲಿಯೇ ಕೆಲಸ ಮಾಡುವುದಾಗಿ ಹೇಳಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.