ADVERTISEMENT

India-Pakistan ceasefire: ಪಾಕ್‌ ಷೇರುಪೇಟೆ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:24 IST
Last Updated 12 ಮೇ 2025, 16:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕರಾಚಿ: ಪಾಕಿಸ್ತಾನದ ಪ್ರಮುಖ ಷೇರುಪೇಟೆಯಾದ ಕರಾಚಿ ಸ್ಟಾಕ್‌ ಎಕ್ಸ್‌ಚೇಂಚ್‌–100 ಸೂಚ್ಯಂಕ ಸೋಮವಾರ ವಹಿವಾಟಿನಲ್ಲಿ ಏರಿಕೆ ಕಂಡಿದೆ.

9,929 ಅಂಶ ಏರಿಕೆ (ಶೇ 9.26ರಷ್ಟು) ಕಂಡಿದ್ದು, 1,17,104 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಕಳೆದ ವಾರದ ವಹಿವಾಟಿನಲ್ಲಿ ಸೂಚ್ಯಂಕವು ಶೇ 6.5ರಷ್ಟು ಕುಸಿತ ಕಂಡಿತ್ತು.

ಭಾರತ ಮತ್ತು ಪಾಕಿಸ್ತಾನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿವೆ. ಹೀಗಾಗಿ ಸೂಚ್ಯಂಕಗಳು ಏರಿಕೆ ದಾಖಲಿಸಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.