ADVERTISEMENT

ಜನ್‌ಧನ್ ಖಾತೆಗಳಲ್ಲಿ ಸರಾಸರಿ ಬ್ಯಾಲೆನ್ಸ್ ₹4,397; ₹85,520 ಕೋಟಿ ಲಾಭ: ನಿರ್ಮಲಾ

ಪಿಟಿಐ
Published 3 ಡಿಸೆಂಬರ್ 2024, 15:22 IST
Last Updated 3 ಡಿಸೆಂಬರ್ 2024, 15:22 IST
ಜನ್‌ಧನ್‌
ಜನ್‌ಧನ್‌   

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಪ‍್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹85,520 ಕೋಟಿ ಲಾಭ ಗಳಿಸಿವೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸುರಕ್ಷತೆ, ಸ್ಥಿರ ಮತ್ತು ಆರೋಗ್ಯದಾಯಕವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, 2023–24ರ ಹಣಕಾಸು ವರ್ಷದಲ್ಲಿ ₹1.41 ಲಕ್ಷ ಕೋಟಿ ದಾಖಲೆಯ ಲಾಭ ಗಳಿಸಿದ್ದವು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಜನ್‌ಧನ್‌ ಖಾತೆಗಳಲ್ಲಿ ಒಟ್ಟು ಠೇವಣಿ ₹2.37 ಲಕ್ಷ ಕೋಟಿಯಷ್ಟಿದೆ. 2014ರಲ್ಲಿ ಸರಾಸರಿ ಈ ಖಾತೆಗಳಲ್ಲಿನ ಬ್ಯಾಲೆನ್ಸ್‌ ₹1,065 ಆಗಿತ್ತು. ಅದು ಈಗ ₹4,397ಕ್ಕೆ ಏರಿದೆ ಎಂದು ಸಚಿವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.