ADVERTISEMENT

ಪುದುಚೇರಿ ನಿಗಮನಕ್ಕೆ ಇ.ವಿ ಬಸ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 15:48 IST
Last Updated 27 ಅಕ್ಟೋಬರ್ 2025, 15:48 IST
ಒಲೆಕ್ಟ್ರಾ ಬಸ್ಸುಗಳು
ಒಲೆಕ್ಟ್ರಾ ಬಸ್ಸುಗಳು   

ಬೆಂಗಳೂರು: ಪುದುಚೇರಿ ರಸ್ತೆ ಸಾರಿಗೆ ನಿಗಮವು (ಪಿಆರ್‌ಟಿಸಿ) ಒಲೆಕ್ಟ್ರಾ ಕಂಪನಿ ತಯಾರಿಸಿದ 25 ಹೊಸ ವಿದ್ಯುತ್‌ ಚಾಲಿತ ಬಸ್ಸುಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ.

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಸ್ಪೀಕರ್ ಆರ್. ಸೆಲ್ವಂ ಅವರು ಬಸ್ಸುಗಳಿಗೆ ಹಸಿರು ನಿಶಾನೆ ತೋರಿದರು ಎಂದು ಪ್ರಕಟಣೆ ತಿಳಿಸಿದೆ.

ಇ.ವಿ ಬಸ್‌ ತಯಾರಿಕಾ ಕಂಪನಿ ಒಲೆಕ್ಟ್ರಾ ಗ್ರೀನ್‌ಟೆಕ್ ಈ ಬಸ್ಸುಗಳನ್ನು ತಯಾರಿಸಿದೆ. ಬಸ್ಸುಗಳನ್ನು ಒಂದು ಬಾರಿಗೆ ಚಾರ್ಜ್‌ ಮಾಡಿದರೆ 200 ಕಿ.ಮೀ.ವರೆಗೆ ಪ್ರಯಾಣಿಸಲು ಸಾಧ್ಯ.

ADVERTISEMENT

ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಒಲೆಕ್ಟ್ರಾ ಕಂಪನಿಯು ಬಸ್ಸುಗಳನ್ನು ಪೂರೈಸುತ್ತದೆ. ಈವೇ ಟ್ರಾನ್ಸ್ ಕಂಪನಿಯು ಕಾರ್ಯಾಚರಣೆ, ನಿರ್ವಹಣೆ ಮತ್ತು ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.