ADVERTISEMENT

ಕ್ವಿಕ್‌–ಕಾಮರ್ಸ್‌ ಮೂಲಕ ₹60 ಸಾವಿರ ಕೋಟಿ ಮೌಲ್ಯದ ಉತ್ಪನ್ನ ಖರೀದಿ‌ಸಿದ ಭಾರತೀಯರು

ಪಿಟಿಐ
Published 10 ಜುಲೈ 2025, 12:43 IST
Last Updated 10 ಜುಲೈ 2025, 12:43 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಮನೆಬಳಕೆ ಉತ್ಪನ್ನಗಳನ್ನು ಗ್ರಾಹಕರು ಇದ್ದಲ್ಲಿಗೆ ತ್ವರಿತವಾಗಿ ತಲುಪಿಸುವ ಬ್ಲಿಂಕಿಟ್‌, ಇನ್‌ಸ್ಟಾಮಾರ್ಟ್‌ನಂತಹ ಕ್ವಿಕ್‌–ಕಾಮರ್ಸ್‌ ವೇದಿಕೆಗಳ ಮೂಲಕ 2024–25ನೇ ಹಣಕಾಸು ವರ್ಷದಲ್ಲಿ ಭಾರತೀಯರು ಒಟ್ಟು ₹64 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದ್ದಾರೆ.

ಇದು ಹಿಂದಿನ ಹಣಕಾಸು ವರ್ಷದಲ್ಲಿ ಇಂತಹ ವೇದಿಕೆಗಳ ಮೂಲಕ ಆಗಿದ್ದ ಖರೀದಿಯ ಮೊತ್ತಕ್ಕೆ ಹೋಲಿಸಿದರೆ ದುಪ್ಪಟ್ಟು. 2023–24ರಲ್ಲಿ ಇಂತಹ ವೇದಿಕೆಗಳ ಮೂಲಕ ₹30 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಿದ್ದರು ಎಂದು ವರದಿಯೊಂದು ಹೇಳಿದೆ.

ADVERTISEMENT

ಇಂತಹ ವೇದಿಕೆಗಳ ಮೂಲಕ ಆಗುವ ಖರೀದಿಯ ಮೊತ್ತವು 2027–28ನೇ ಹಣಕಾಸು ವರ್ಷದ ಹೊತ್ತಿಗೆ ₹2 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ಕೇರ್‌ಎಜ್ ರೇಟಿಂಗ್ಸ್‌ ಸಂಸ್ಥೆಯ ಅಂಗಸಂಸ್ಥೆ ಕೇರ್‌ಎಜ್‌ ಅಡ್ವೈಸರಿ ಸಿದ್ಧಪಡಿಸಿರುವ ವರದಿಯು ಹೇಳಿದೆ.

ಈ ಎಲ್ಲ ಖರೀದಿಗಳ ಮೂಲಕ ಇಂತಹ ವೇದಿಕೆಗಳು 2024–25ರಲ್ಲಿ ₹10,500 ಕೋಟಿ ವರಮಾನ ಗಳಿಸಿವೆ. ಇದು 2021–22ರಲ್ಲಿ ಕಂಡಿದ್ದ ₹450 ಕೋಟಿ ವರಮಾನಕ್ಕೆ ಹೋಲಿಸಿದರೆ ಭಾರಿ ಏರಿಕೆ. ವೇದಿಕೆಗಳ ವರಮಾನವು 2027–28ನೇ ಹಣಕಾಸು ವರ್ಷದಲ್ಲಿ ₹34,500 ಕೋಟಿಗೆ ಏರಿಕೆ ಆಗುವ ಅಂದಾಜು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.