ADVERTISEMENT

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2026, 11:43 IST
Last Updated 12 ಜನವರಿ 2026, 11:43 IST
<div class="paragraphs"><p>ಎಎಪಿ ನಾಯಕ ರಾಘವ್ ಚಡ್ಡಾ</p></div>

ಎಎಪಿ ನಾಯಕ ರಾಘವ್ ಚಡ್ಡಾ

   

ಚಿತ್ರ: ಇನ್‌ಸ್ಟಾಗ್ರಾಂ

ಈಗಂತೂ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕುಳಿತಲ್ಲೇ ಎಲ್ಲವನ್ನೂ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಅಷ್ಟರ ಮಟ್ಟಿಗೆ ತಂತ್ರಜ್ಞಾನದಲ್ಲಿ ನಮ್ಮ ದೇಶ ಮುಂದುವರಿದಿದೆ. ಕ್ವಿಕ್‌ ಕಾಮರ್ಸ್‌ ಕಂಪನಿಗಳು ನಿಮಿಷಗಳಲ್ಲಿ ಆಹಾರ ಪದಾರ್ಥಗಳಿಂದ ಹಿಡಿದು ಮನೆಗೆ ಬೇಕಾದ ತರಕಾರಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತವೆ. ಈ ರೀತಿಯ ಹಲವು ಆನ್‌ಲೈನ್‌ ಅಪ್ಲಿಕೇಶನ್‌ಗಳಲ್ಲಿ ಬ್ಲಿಂಕಿಟ್‌ ಕೂಡ ಒಂದು.

ADVERTISEMENT

ಈಗ ಇದೇ ಬ್ಲಿಂಕಿಟ್‌ ಡೆಲಿವರಿ ಬಾಯ್ ವೇಷದಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್‌ ಚಡ್ಡಾ ಅವರು ಒಂದು ದಿನ ಬ್ಲಿಂಕಿಟ್‌ ಡೆಲಿವರಿ ಬಾಯ್ ಆಗಿ ಕ್ಷಣವನ್ನು ಕಳೆದಿದ್ದಾರೆ.

ವಿಡಿಯೊದಲ್ಲಿ ರಾಘವ್ ಚಡ್ಡಾ ಅವರು ಬ್ಲಿಂಕಿಟ್ ಟಿ-ಶರ್ಟ್ ಮತ್ತು ಜಾಕೆಟ್ ಧರಿಸಿ, ಡೆಲಿವರಿ ಬ್ಯಾಗ್ ಅನ್ನು ಬೆನ್ನಿಗೆ ಹಾಕಿಕೊಂಡು ಬೈಕ್‌ ಹತ್ತಿರುವುದು ಕಾಣಿಸಿದೆ. ನಂತರ ಅವರು ಡೆಲಿವರಿ ಬಾಯ್‌ನಂತೆ ವಿತರಣಾ ಸ್ಥಳದ ಕಡೆಗೆ ಹೋಗುತ್ತಾರೆ. ಗ್ರಾಹಕರ ಮನೆ ಬಾಗಿಲಿನಲ್ಲಿ, ಸವಾರ ಲಿಫ್ಟ್‌ನಿಂದ ಹೊರಬಂದು ಗಂಟೆ ಬಾರಿಸುತ್ತಾರೆ. ಆಗ ಚಡ್ಡಾ, ಅವರನ್ನು ಹಿಂಬಾಲಿಸುತ್ತಾರೆ. ಆಗ ವಿಡಿಯೊ ಕೊನೆಯಲ್ಲಿ ‘ಮುಂದಿನ ಭಾಗಕ್ಕಾಗಿ ಕಾಯಿರಿ‘ ಎಂದು ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.