ಬೆಂಗಳೂರು: ಯಲಹಂಕದಲ್ಲಿ ಇರುವ ರೈಲ್ವೆ ಗಾಲಿ ಮತ್ತು ಅಚ್ಚು ತಯಾರಿಸುವ ಕಾರ್ಖಾನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಿದೆ.
ರೈಲ್ವೆ ಮಂಡಳಿಯು 2019–20ರ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ್ದ 1,76,200 ಗಾಲಿ ತಯಾರಿಕೆಯ ಗುರಿ ಬದಲಿಗೆ, ಈ ತಿಂಗಳ 19ರ ವೇಳೆಗೆ 1,76,387 ಗಾಲಿಗಳನ್ನು ತಯಾರಿಸಲಾಗಿದೆ. ಅಚ್ಚುಗಳ ತಯಾರಿಕೆಯು 77 ಸಾವಿರ ಗುರಿ ಬದಲಿಗೆ 80,309ಕ್ಕೆ ತಲುಪಿದೆ. ಕಾರ್ಖಾನೆಯ ವಾರ್ಷಿಕ ವಹಿವಾಟು ₹ 1,448.50 ಕೋಟಿಗೆ ತಲುಪಿದೆ. 2018–19ರಲ್ಲಿ ₹ 993 ಕೋಟಿ ಮೊತ್ತದ ವಹಿವಾಟು ನಡೆದಿತ್ತು. ರೈಲ್ವೆ ಬೋಗಿಗಳು ಮತ್ತು ಎಂಜಿನ್‌ಗಳ ತಯಾರಿಕೆಯಲ್ಲಿನ ಹೆಚ್ಚಳದ ಕಾರಣಕ್ಕೆ ಗಾಲಿ ಮತ್ತು ಅಚ್ಚುಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಾರ್ಖಾನೆಯ ಜನರಲ್ ಮ್ಯಾನೇಜರ್ ರಾಜೀವ್ ಕುಮಾರ್ ವ್ಯಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.