ADVERTISEMENT

ಯುಗಾದಿ ಹಬ್ಬದ ಪ್ರಯುಕ್ತ ರಾಮ್‌ರಾಜ್‌ ಕಾಟನ್‌ನಿಂದ ವಿಶೇಷ ಸಂಗ್ರಹ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:42 IST
Last Updated 27 ಫೆಬ್ರುವರಿ 2026, 15:42 IST
<div class="paragraphs"><p>ರಾಮ್‌ರಾಜ್‌ ಕಾಟನ್‌ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕುರ್ತಾ ಸೆಟ್ ಮತ್ತು ಧೋತಿ ಸೆಟ್‌ಗಳ ದಿರಿಸುಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ</p></div>

ರಾಮ್‌ರಾಜ್‌ ಕಾಟನ್‌ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕುರ್ತಾ ಸೆಟ್ ಮತ್ತು ಧೋತಿ ಸೆಟ್‌ಗಳ ದಿರಿಸುಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ

   

ಬೆಂಗಳೂರು: ರಾಮ್‌ರಾಜ್‌ ಕಾಟನ್‌ ಸಂಸ್ಥೆಯು ಯುಗಾದಿ ಹಬ್ಬದ ಪ್ರಯುಕ್ತ ಕುರ್ತಾ ಸೆಟ್ ಮತ್ತು ಧೋತಿ ಸೆಟ್‌ಗಳ ವಿಶೇಷ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಸಂಕಲ್ಪಂ ಪ್ರೈಮ್, ಹಳದಿ ಕುರ್ತಾ, ಮಿಸ್ಟಿಕ್ ಕುರ್ತಾ ಮತ್ತು ಲಿಟಲ್ ಸ್ಟಾರ್ ಫ್ಯೂಷನ್ ಸೆಟ್‌ಗಳು ಪ್ರಮುಖವಾಗಿದ್ದು, ಇವುಗಳಲ್ಲಿ ಪ್ರತಿಯೊಂದು ಯುಗಾದಿಯ ಸಂಭ್ರಮವನ್ನು ಸಾರುವಂತೆ ಹಾಗೂ ಏಕರೂಪದ ಶೈಲಿಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ADVERTISEMENT

ಈ ಸಂಗ್ರಹವು ರಾಮ್‌ರಾಜ್‌ ಕಾಟನ್‌ ಮಳಿಗೆಗಳು ಮತ್ತು ಪ್ರಮುಖ ಜವಳಿ ಅಂಗಡಿಗಳಲ್ಲಿ ಲಭ್ಯವಿದೆ. www.ramrajcotton.inಗೆ ಭೇಟಿ ನೀಡಿ, ಆನ್‌ಲೈನ್  ಮೂಲಕವೂ ಖರೀದಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. 

‘ಯುಗಾದಿಯು ಹೊಸ ಆರಂಭ, ಸಕಾರಾತ್ಮಕ ಮನೋಭಾವ ಮತ್ತು ಸಮೃದ್ಧಿಯನ್ನು ಸಾರುವ ಸಂಭ್ರಮದ ಹಬ್ಬವಾಗಿದೆ. ರಾಮ್‌ರಾಜ್ ಕಾಟನ್‌ ಈ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಸಂಗ್ರಹವನ್ನು ಬಿಡುಗಡೆ ಮಾಡಿದೆ’ ಎಂದು ರಾಮ್‌ರಾಜ್ ಕಾಟನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಕೆ.ಆರ್. ನಾಗರಾಜನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.