ADVERTISEMENT

ರೆಪೊ ದರ ಏರಿಕೆಯ ಸಮಯ ಅಚ್ಚರಿ ಮೂಡಿಸಿದೆ: ನಿರ್ಮಲಾ

ಪಿಟಿಐ
Published 8 ಮೇ 2022, 13:56 IST
Last Updated 8 ಮೇ 2022, 13:56 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌    

ಮುಂಬೈ: ರೆಪೊ ದರ ಏರಿಕೆಯು ಅಚ್ಚರಿ ಮೂಡಿಸಿಲ್ಲ, ಆದರೆ ದರ ಏರಿಕೆ ಮಾಡಿದ ಸಮಯವು ಅನಿರೀಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಣಕಾಸು ನೀತಿ ಸಮಿತಿಯ ಎರಡು ಸಭೆಗಳ ನಡುವೆ ಬಡ್ಡಿದರ ಏರಿಕೆ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಬಡ್ಡಿದರ ಏರಿಕೆಯು ಸರ್ಕಾರದ ಉದ್ದೇಶಿತ ಮೂಲಸೌಕರ್ಯ ಹೂಡಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.