ಮುಂಬೈ: ಎಟಿಎಂಗಳಲ್ಲಿ ₹100 ಮತ್ತು ₹200 ಮುಖಬೆಲೆಯ ನೋಟುಗಳು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಬ್ಯಾಂಕ್‌ಗಳು ಕ್ರಮವಹಿಸಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ದೇಶನ ನೀಡಿದೆ.
ಬ್ಯಾಂಕ್‌ಗಳು ಮತ್ತು ಎಟಿಎಂಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳು ಹಂತ ಹಂತವಾಗಿ ಈ ಬಗ್ಗೆ ಕ್ರಮವಹಿಸಬೇಕಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕಿದೆ ಎಂದು ಹೇಳಿದೆ.
ಎಟಿಎಂಗಳಲ್ಲಿ ಅಳವಡಿಸಿರುವ ಕ್ಯಾಸೆಟ್‌ಗಳ (ಹಣ ಸಂಗ್ರಹಿಸಲು ಬಳಸುವ ಪೆಟ್ಟಿಗೆ) ಪೈಕಿ ಒಂದು ಕ್ಯಾಸೆಟ್‌ನಲ್ಲಿ ₹100 ಮತ್ತು ₹200 ಮುಖಬೆಲೆಯ ನೋಟುಗಳು ಇರುವಂತೆ ನೋಡಿಕೊಳ್ಳಬೇಕು. ಸೆಪ್ಟೆಂಬರ್ 30ರೊಳಗೆ ಹಾಲಿ ಇರುವ ಎಟಿಎಂಗಳ ಪೈಕಿ ಶೇ 75ರಷ್ಟರಲ್ಲಿ ಈ ನಿಯಮ ಪಾಲಿಸಬೇಕು. 2026ರ ಮಾರ್ಚ್ 31ರೊಳಗೆ ಶೇ 90ರಷ್ಟು ಎಟಿಎಂಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಬೇಕಿದೆ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.