ADVERTISEMENT

ಕಾರ್ಡ್ ವಿವರ ಸಂಗ್ರಹ: ಗಡುವು ವಿಸ್ತರಿಸಿದ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 16:20 IST
Last Updated 23 ಡಿಸೆಂಬರ್ 2021, 16:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಾವತಿ ವಹಿವಾಟಿನ ಎಲ್ಲ ಪಾಲುದಾರರು ‘ಟೋಕನ್’ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲು ನೀಡಿದ್ದ ಗಡುವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಮಟ್ಟಿಗೆ ಮುಂದೂಡಿದೆ.

ಈ ವ್ಯವಸ್ಥೆಯು ಜುಲೈ 1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆರು ತಿಂಗಳ ಕಾಲಾವಕಾಶವನ್ನು ಆರ್‌ಬಿಐ ನೀಡಿತ್ತು. ಅದರ ಅನ್ವಯ ಹೊಸ ವ್ಯವಸ್ಥೆಯು ಜನವರಿ 1ರಿಂದ ಜಾರಿಗೆ ಬರಬೇಕಿತ್ತು. ಆದರೆ, ಗಡುವನ್ನು ಮತ್ತೆ ವಿಸ್ತರಣೆ ಮಾಡಬೇಕು ಎಂದು ಬ್ಯಾಂಕಿಂಗ್ ವಲಯವು ಆರ್‌ಬಿಐಗೆ ಮನವಿ ಸಲ್ಲಿಸಿತ್ತು.

ಇದನ್ನು ಪರಿಗಣಿಸಿರುವ ಆರ್‌ಬಿಐ, ಈಗ ಗಡುವನ್ನು ಎರಡನೆಯ ಬಾರಿಗೆ ವಿಸ್ತರಣೆ ಮಾಡಿದೆ. ಇದರ ಅನ್ವಯ, ಹೊಸ ವ್ಯವಸ್ಥೆಯು 2022ರ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 2022ರ ಜೂನ್‌ 30ರ ನಂತರದಲ್ಲಿ, ಸಂಗ್ರಹಿಸಿ ಇಡಲಾದ ಕಾರ್ಡ್‌ ವಿವರಗಳನ್ನು ನಾಶಪಡಿಸಲಾಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಡೆಬಿಟ್‌ ಹಾಗೂ ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಗಳು ಮಾತ್ರ ಕಾರ್ಡ್‌ ವಿವರಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಲು ಜೂನ್‌ 30ರ ನಂತರ ಅವಕಾಶ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.