ADVERTISEMENT

ರೆಪೊ ಶೇ 0.25 ಹೆಚ್ಚಳ ಸಂಭವ

ಪಿಟಿಐ
Published 5 ಫೆಬ್ರುವರಿ 2023, 18:58 IST
Last Updated 5 ಫೆಬ್ರುವರಿ 2023, 18:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಇಳಿಮುಖವಾಗಿದೆ. ಇದರ ಜೊತೆಗೆ ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿದರ ಹೆಚ್ಚಳದ ಪ್ರಮಾಣವನ್ನು ಕಡಿಮೆ ಮಾಡಿದೆ. ಹೀಗಾಗಿ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂಬರುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರವನ್ನು ಶೇಕಡ 0.25ರಷ್ಟು ಮಾತ್ರವೇ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಸೋಮವಾರದಿಂದ ಬುಧವಾರದವರೆಗೆ ಸಭೆ ಸೇರಲಿದ್ದು, ಸಭೆಯ ನಿರ್ಧಾರಗಳನ್ನು ಬುಧವಾರ ಪ್ರಕಟಿಸಲಿದೆ.

ಡಿಸೆಂಬರ್‌ನಲ್ಲಿ ನಡೆದಿದ್ದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ, ರೆಪೊ ದರವನ್ನು ಶೇ 0.35ರಷ್ಟು ಹೆಚ್ಚಿಸಿತ್ತು. ಅದಕ್ಕೂ ಹಿಂದಿನ ಮೂರು ಬಾರಿ ತಲಾ ಶೇ 0.50ರಷ್ಟು ಹೆಚ್ಚಳ ಮಾಡಿತ್ತು. 2022ರ ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಒಟ್ಟು ರೆಪೊ ದರವನ್ನು ಶೇ 2.25ರಷ್ಟು ಹೆಚ್ಚಿಸಲಾಗಿದೆ. ಚಿಲ್ಲರೆ ಹಣದುಬ್ಬರ ದರವು ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಶೇ 6ಕ್ಕಿಂತ ಕೆಳಕ್ಕೆ ಇಳಿಕೆ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.