ಮುಂಬೈ: ರೆಪೊ ದರ ತೀರ್ಮಾನಿಸುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುಂದೂಡಿದೆ. ಇದು ಮಂಗಳವಾರದಿಂದ ಆರಂಭವಾಗಬೇಕಿತ್ತು. ಸ್ವತಂತ್ರ ನಿರ್ದೇಶಕರ ನೇಮಕವು ತಡವಾಗಿರುವ ಕಾರಣ, ಕೋರಂ ಭರ್ತಿ ಆಗುವುದಿಲ್ಲ ಎಂದು ಸಭೆಯನ್ನು ಮುಂದೂಡಿರಬಹುದು ಎನ್ನಲಾಗಿದೆ.
ಸಭೆಯ ಯಾವಾಗ ನಡೆಯಲಿದೆ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ರೆಪೊ ದರ ನಿರ್ಧರಿಸುವ ಹೊಣೆಯನ್ನು ಸರ್ಕಾರವು 2016ರಲ್ಲಿ ಈ ಸಮಿತಿಗೆ ವರ್ಗಾಯಿಸಿತು. ಸಮಿತಿಯಲ್ಲಿ ಆರು ಜನ ಸದಸ್ಯರಿರುತ್ತಾರೆ. ಈ ಪೈಕಿ ಮೂವರು ಸ್ವತಂತ್ರ ನಿರ್ದೇಶಕರು.
ಮೂವರು ಸ್ವತಂತ್ರ ನಿರ್ದೇಶಕರ ಅಧಿಕಾರ ಅವಧಿಯು ಹಿಂದಿನ ತಿಂಗಳಲ್ಲಿ ಮುಕ್ತಾಯಗೊಂಡಿದೆ. ಅವರ ಸ್ಥಾನಕ್ಕೆ ಹೊಸಬರ ನೇಮಕ ಆಗಿಲ್ಲ. ಎಂಪಿಸಿ ಸಭೆಯಲ್ಲಿ ಕನಿಷ್ಠ ನಾಲ್ಕು ಸದಸ್ಯರು ಹಾಜರಿರಬೇಕು ಎಂದು ನಿಯಮ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.