ADVERTISEMENT

ರೆಪೊ ಇಳಿಕೆಗೆ ಉದ್ಯಮ ವಲಯ ಹರ್ಷ

ಪಿಟಿಐ
Published 5 ಡಿಸೆಂಬರ್ 2025, 15:47 IST
Last Updated 5 ಡಿಸೆಂಬರ್ 2025, 15:47 IST
ರೆಪೊ ದರ
ರೆಪೊ ದರ    

ನವದೆಹಲಿ: ರೆಪೊ ದರ ಇಳಿಕೆ ನಿರ್ಧಾರವನ್ನು ಆಟೊಮೊಬೈಲ್‌ ಹಾಗೂ ರಿಯಲ್‌ ಎಸ್ಟೇಟ್ ಉದ್ಯಮ ವಲಯಗಳು ಸ್ವಾಗತಿಸಿವೆ.

ರೆಪೊ ದರವನ್ನು ಶುಕ್ರವಾರ ಶೇ 0.25ರಷ್ಟು ತಗ್ಗಿಸಿರುವುದು ಹಾಗೂ ಈ ಹಿಂದಿನ ರೆಪೊ ದರ ಇಳಿಕೆ ಕ್ರಮಗಳು ದೇಶದ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಲು ಹಣಕಾಸಿನ ಪೂರಕ ಕ್ರಮಗಳಾಗಿ ಒದಗಿಬಂದಿವೆ ಎಂದು ಭಾರತೀಯ ಆಟೊಮೊಬೈಲ್‌ ತಯಾರಕರ ಸಂಘದ (ಎಸ್‌ಐಎಎಂ) ಅಧ್ಯಕ್ಷ ಶೈಲೇಶ್‌ ಚಂದ್ರ ಹೇಳಿದ್ದಾರೆ.

‘2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಆದಾಯ ತೆರಿಗೆ ವಿನಾಯಿತಿ ಕ್ರಮ, ಜಿಎಸ್‌ಟಿ ದರ ಪರಿಷ್ಕರಣೆಯು ವಾಹನಗಳು ಇನ್ನಷ್ಟು ಕೈಗೆಟಕುವಂತೆ ಮಾಡಿವೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

‘ಆರ್‌ಬಿಐನ ಕ್ರಮವು ಸಾಲದ ಬಡ್ಡಿಯನ್ನು ಕಡಿಮೆ ಮಾಡುತ್ತದೆ, ಸಾಲ ನೀಡಿಕೆಯನ್ನು ಹೆಚ್ಚಿಸುತ್ತದೆ, ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ವಲಯಗಳಲ್ಲಿ ಬೇಡಿಕೆ ಹೆಚ್ಚಿಸುತ್ತದೆ’ ಎಂದು ಕ್ರೆಡಾಯ್ ಅಧ್ಯಕ್ಷ ಶೇಖರ್ ಪಟೇಲ್ ಹೇಳಿದ್ದಾರೆ.

ರೆಪೊ ದರವನ್ನು ಇಳಿಕೆ ಮಾಡಿರುವುದು ಅರ್ಥ ವ್ಯವಸ್ಥೆಗೆ ಹೊಸ ವೇಗವನ್ನು ನೀಡಲು ಬಹಳ ಮುಖ್ಯವಾದ ಹೆಜ್ಜೆ ಎಂದು ರಾಷ್ಟ್ರೀಯ ರಿಯಲ್ ಎಸ್ಟೇಟ್‌ ಅಭಿವೃದ್ಧಿ ಮಂಡಳಿಯ (ನಾರೆಡ್ಕೊ) ಅಧ್ಯಕ್ಷ ಪ್ರವೀಣ್ ಜೈನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.