ADVERTISEMENT

₹10, ₹500 ಹೊಸ ನೋಟು ಬಿಡುಗಡೆ ಶೀಘ್ರ: ಆರ್‌ಬಿಐ

ಪಿಟಿಐ
Published 5 ಏಪ್ರಿಲ್ 2025, 14:35 IST
Last Updated 5 ಏಪ್ರಿಲ್ 2025, 14:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಶೀಘ್ರವೇ ಮಹಾತ್ಮ ಗಾಂಧಿ ಅವರ ಭಾವಚಿತ್ರ ಮತ್ತು ಗವರ್ನರ್‌ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವ ₹10 ಮತ್ತು ₹500 ಮುಖಬೆಲೆಯ ಹೊಸ ನೋಟುಗಳ ಸರಣಿಯನ್ನು ಚಲಾವಣೆಗೆ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸ‌ರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಮಹಾತ್ಮ ಗಾಂಧಿ (ಹೊಸ) ಸರಣಿಯ ನೋಟುಗಳ ಮಾದರಿಯಲ್ಲಿಯೇ ಈ ಹೊಸ ನೋಟುಗಳು ಇರಲಿವೆ ಎಂದು ಹೇಳಿದೆ.

ಗವರ್ನರ್‌ ಮಲ್ಹೋತ್ರಾ ಅವರ ಸಹಿ ಇರುವ ₹100 ಮತ್ತು ₹200 ಮುಖಬೆಲೆಯ ಹೊಸ ನೋಟುಗಳನ್ನೂ ಚಲಾವಣೆಗೆ ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳು ಆರ್‌ಬಿಐ ತಿಳಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.