ಮುಂಬೈ: ವಿನಿಮಯ ದರದ ಏರಿಳಿತವನ್ನು ನಿಯಂತ್ರಿಸಲು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಗಸ್ಟ್ ತಿಂಗಳಿನಲ್ಲಿ 7.7 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ. ಇದು ರೂಪಾಯಿ ಲೆಕ್ಕದಲ್ಲಿ ₹67,751 ಕೋಟಿ ಆಗುತ್ತದೆ.
ಈ ಡಾಲರ್ ಮಾರಾಟವು ಜುಲೈ ತಿಂಗಳಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಆರ್‌ಬಿಐ ಡಾಲರ್‌ಗಳನ್ನು ಖರೀದಿಸಿಲ್ಲ ಎಂದು ಸಹ ತಿಳಿಸಿದೆ. ಆಗಸ್ಟ್‌ನಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಶೇ 1.6ರಷ್ಟು ಕುಸಿದಿತ್ತು.
ಹೆಚ್ಚಿದ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಅನಿಶ್ಚಿತತೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.