ADVERTISEMENT

REIT IPO Launch: ₹4,800 ಕೋಟಿ ಬಂಡವಾಳ ಸಂಗ್ರಹ ಗುರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 15:43 IST
Last Updated 4 ಆಗಸ್ಟ್ 2025, 15:43 IST
<div class="paragraphs"><p>ರಿಯಲ್ ಎಸ್ಟೇಟ್</p></div>

ರಿಯಲ್ ಎಸ್ಟೇಟ್

   

ಬೆಂಗಳೂರು: ನಾಲೆಜ್‌ ರಿಯಾಲ್ಟಿ ಟ್ರಸ್ಟ್‌ (ಆರ್‌ಇಐಟಿ) ತನ್ನ ಯೂನಿಟ್‌ಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮಂಗಳವಾರದಿಂದ ಮುಕ್ತವಾಗಿಸಲಿದೆ. ಯೂನಿಟ್‌ ಬೆಲೆಯನ್ನು ₹95–100ಕ್ಕೆ ನಿಗದಿ ಮಾಡಲಾಗಿದೆ. ಮಂಗಳವಾರದಿಂದ ಗುರುವಾರದವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ.

‘ಒಟ್ಟು ಆಸ್ತಿ ಮೌಲ್ಯದ ಲೆಕ್ಕದಲ್ಲಿ ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ (ಆರ್‌ಇಐಟಿ) ತನ್ನದು’ ಎಂದು ಅದು ಹೇಳಿಕೊಂಡಿದೆ.

ADVERTISEMENT

ಸಣ್ಣ ಹೂಡಿಕೆದಾರರು ಕನಿಷ್ಠ 150 ಯೂನಿಟ್‌ಗಳಿಗೆ ಹೂಡಿಕೆ ಮಾಡಬೇಕು. ನಾಲೆಜ್‌ ರಿಯಾಲ್ಟಿ ಟ್ರಸ್ಟ್‌ ₹4,800 ಕೋಟಿ ಮೌಲ್ಯದ ಯೂನಿಟ್‌ಗಳನ್ನು ಹೊಸದಾಗಿ ಖರೀದಿಗೆ ಮುಕ್ತವಾಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.