ADVERTISEMENT

ಬೆಂಗಳೂರು: ಸಿಪಿಸಿಬಿ ಜೆನ್‌ಸೆಟ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 20:46 IST
Last Updated 2 ಫೆಬ್ರುವರಿ 2025, 20:46 IST
   

ಬೆಂಗಳೂರು: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಉತ್ಪನ್ನಗಳ ಅಧಿಕೃತ ಉತ್ಪಾದಕರಾದ ಎಸ್ಕಾನ್‌ ಜೆನ್ಸೆಟ್ಸ್ ಕಂಪನಿಯ ಸಿಪಿಸಿಬಿ 4+ ಜೆನ್‌ ಸೆಟ್‌ಗಳನ್ನು ಮಹೀಂದ್ರಾ ಪವರೋಲ್‌ನ ಪ್ರಧಾನ ವ್ಯವಸ್ಥಾಪಕ ಸುಮಿತ್ ಗುಪ್ತಾ ಹಾಗೂ ಎಸ್ಕಾನ್‌ ಜೆನ್ಸೆಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಧನ್ಧಾನಿಯಾ ಬಿಡುಗಡೆಗೊಳಿಸಿದರು.

ದಾಬಸ್‌ಪೇಟೆ ಘಟಕದಲ್ಲಿ ತಯಾರಿಸಿರುವ ಈ ಜೆನ್‌ಸೆಟ್‌ಗಳು ಆಧುನಿಕ ತಂತ್ರಜ್ಞಾನ ಹೊಂದಿರುವ ಕಾಮನ್ ರೇಲ್ ಡೀಸಲ್ ಎಂಜಿನ್ ಹೊಂದಿವೆ. ಇಂಧನ ಕ್ಷಮತೆ ಮತ್ತು ಹೆಚ್ಚಿನ ಕೆಲಸಕ್ಕೆ ಸೂಕ್ತವಾಗಿದೆ. ಕಡಿಮೆ ಮಾಲಿನ್ಯ ಹೊರಸೂಸುತ್ತದೆ. ಜೆನ್‌ಸೆಟ್‌ಗಳಿಗೆ ಸಂಬಂಧಿಸಿದ ಯಾವುದೇ ವಿಚಾರಗಳು, ದೂರುಗಳಿಗೆ ಸ್ಪಂದಿಸಲು ಎಲ್ಲೆಡೆ ಗ್ರಾಹಕ ಸೇವಾ ಕೇಂದ್ರಗಳು ಇವೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT