ADVERTISEMENT

ರಿಲಯನ್ಸ್‌: 2ನೆಯ ಅತಿದೊಡ್ಡ ಬ್ರ್ಯಾಂಡ್‌

ಪಿಟಿಐ
Published 5 ಆಗಸ್ಟ್ 2020, 20:56 IST
Last Updated 5 ಆಗಸ್ಟ್ 2020, 20:56 IST
ರಿಲಯನ್ಸ್‌ ಇಂಡಸ್ಟ್ರೀಸ್‌
ರಿಲಯನ್ಸ್‌ ಇಂಡಸ್ಟ್ರೀಸ್‌   

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡ ಸ್ಟ್ರೀಸ್‌ ಕಂಪನಿಯು ಜಾಗತಿಕ ಮಟ್ಟದಲ್ಲಿ ಎರಡನೆಯ ಅತಿದೊಡ್ಡ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಫ್ಯೂಚರ್‌ ಬ್ರ್ಯಾಂಡ್‌ ಇಂಡೆಕ್ಸ್ 2020 ಅನ್ವಯ, ಮೊದಲನೆಯ ಅತಿದೊಡ್ಡ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಅಮೆರಿಕದ ಆ್ಯಪಲ್‌ ಕಂಪನಿಯ ಪಾಲಾಗಿದೆ.

ಭಾರತದಲ್ಲಿ ಅತಿಹೆಚ್ಚು ಲಾಭಗ ಳಿಸುವ ಕಂಪನಿಗಳಲ್ಲಿ ಒಂದು ರಿಲ ಯನ್ಸ್. ಇದು ‘ಗೌರವಕ್ಕೆ ಪಾತ್ರವಾಗಿದೆ’, ಕಂಪನಿಯ ನಡತೆಯು ‘ನೈತಿಕವಾಗಿ ಇರುವಂತೆ’ ಕಾಣುತ್ತಿದೆ ಎಂದು ಫ್ಯೂಚರ್‌ಬ್ರ್ಯಾಂಡ್‌ ಸಂಸ್ಥೆ ಹೇಳಿದೆ. ‘ಜನ ಈ ಕಂಪನಿಯ ಜೊತೆ ಗಟ್ಟಿಯಾದ ಭಾವನಾತ್ಮಕ ನಂಟು ಹೊಂದಿದ್ದಾರೆ.ಕಂಪನಿಯು ಇಂಧನ, ಪೆಟ್ರೊಕೆಮಿಕಲ್ಸ್, ಜವಳಿ, ನೈಸರ್ಗಿಕ ಸಂಪನ್ಮೂಲ, ಚಿಲ್ಲರೆ ವಹಿವಾಟು ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಚಟುವಟಿಕೆ ವಿಸ್ತರಿಸಿಕೊಂಡಿದೆ. ಈಗ, ಗೂಗಲ್ ಮತ್ತು ಫೇಸ್‌ಬುಕ್‌ ಕಂಪನಿಗಳು ಈ ಕಂಪನಿಯ ಷೇರು ಖರೀದಿಸುತ್ತಿವೆ. ಮುಂದಿನ ಬಾರಿ ಈ ಪಟ್ಟಿಯನ್ನು ಸಿದ್ಧಪಡಿಸುವ ಹೊತ್ತಿಗೆ ರಿಲಯನ್ಸ್‌, ಮೊದಲ ಸ್ಥಾನಕ್ಕೆ ಹವಣಿಸಬಹುದು’ ಎಂದು ಫ್ಯೂಚರ್‌ಬ್ರ್ಯಾಂಡ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT