ADVERTISEMENT

ರಿಲಯನ್ಸ್‌ನಿಂದ ಆರ್‌ಇಸಿ ಸ್ವಾಧೀನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:01 IST
Last Updated 11 ಅಕ್ಟೋಬರ್ 2021, 2:01 IST

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್‌, ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್‌ ಎಎಸ್‌ ಕಂಪನಿಯನ್ನು ಚೈನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಿಂದ ₹ 5,792 ಕೋಟಿ ಮೊತ್ತಕ್ಕೆ ಖರೀದಿಸಲಿದೆ.

ಆರ್‌ಇಸಿ ಮುಖ್ಯ ಕಚೇರಿ ಇರುವುದು ನಾರ್ವೆ ದೇಶದಲ್ಲಿ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಏಷ್ಯಾ–ಪೆಸಿಫಿಕ್ ಪ್ರದೇಶಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಇದು ಹೊಂದಿದೆ. ಆರ್‌ಇಸಿ ಕಂಪನಿಯು ಉತ್ತಮ ಗುಣಮಟ್ಟದ, ದೀರ್ಘ ಬಾಳಿಕೆಯ ಸೋಲಾರ್ ಕೋಶಗಳಿಗೆ ಹೆಸರುವಾಸಿ ಎಂದು ‍ಪ್ರಕಟಣೆ ತಿಳಿಸಿದೆ. ಆರ್‌ಇಸಿ ಕಂಪನಿಯಲ್ಲಿ ಒಟ್ಟು 1,300ಕ್ಕಿಂತ ಹೆಚ್ಚು ನೌಕರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT