
ಇ.ಡಿ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ಮಾಜಿ ಅಧ್ಯಕ್ಷ ಪುನೀತ್ ಗರ್ಗ್
ಪುನೀತ್ ಗರ್ಗ್ ಚಿತ್ರ ಕೃಪೆ: X/@Dhruv02164734
ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ಸಮೂಹ ಕಂಪನಿಗಳ ವಿರುದ್ಧದ ₹ 40,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮಾಜಿ ಅಧ್ಯಕ್ಷ ಪುನೀತ್ ಗರ್ಗ್ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ತಿಳಿಸಿದೆ.
61 ವರ್ಷದ ಗರ್ಗ್ ಅವರನ್ನು ಇ.ಡಿ. ಗುರುವಾರ ವಶಕ್ಕೆ ಪಡೆದಿತ್ತು.
ದೆಹಲಿಯಲ್ಲಿರುವ ಹಣದ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯವು ಗರ್ಗ್ ಅವರನ್ನು 9 ದಿನಗಳವರೆಗೆ ತನ್ನ ಕಸ್ಟಡಿಗೆ ನೀಡಿರುವುದಾಗಿ ತನಿಖಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಈ ಬೆಳವಣಿಗೆ ಸಂಬಂಧ ರಿಲಯನ್ಸ್ ಗ್ರೂಪ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗರ್ಗ್ ಅವರ ಪತ್ನಿಯ ಹೆಸರಿನಲ್ಲಿರುವ ಷೇರುಗಳು ಹಾಗೂ ಮ್ಯೂಚುವಲ್ ಫಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ. ಬುಧವಾರ ಹೇಳಿತ್ತು.
'RCOMನಲ್ಲಿ 2001ರಿಂದ 2005ರ ವರೆಗೆ ಹಿರಿಯ ವ್ಯವಸ್ಥಾಪಕ ಹಾಗೂ ನಿರ್ದೇಶಕ ಸ್ಥಾನದಲ್ಲಿದ್ದ ಗರ್ಗ್, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು' ಎಂದು ಆರೋಪಿಸಿರುವ ಇ.ಡಿ., ಈ ಹಣವನ್ನು ವಿದೇಶಿ ಸಂಸ್ಥೆಗಳು ಮತ್ತು ಘಟಕಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದೂ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.