ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ನಿವ್ವಳ ಲಾಭ ಹೆಚ್ಚಳ

ಪಿಟಿಐ
Published 18 ಅಕ್ಟೋಬರ್ 2019, 15:23 IST
Last Updated 18 ಅಕ್ಟೋಬರ್ 2019, 15:23 IST
ಮುಕೇಶ್‌
ಮುಕೇಶ್‌   

ನವದೆಹಲಿ : ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌), ದ್ವಿತೀಯ ತ್ರೈಮಾಸಿಕದಲ್ಲಿ ₹ 11,262 ಕೋಟಿ ನಿವ್ವಳ ಲಾಭ ಗಳಿಸಿದೆ.

ರಿಟೇಲ್‌, ದೂರಸಂಪರ್ಕ ವಹಿವಾಟು ಹೆಚ್ಚಳ, ತೈಲ ಸಂಸ್ಕರಣಾ ವಹಿವಾಟಿನ ಲಾಭದ ಪ್ರಮಾಣ ಏರಿಕೆಯಿಂದ ಹಿಂದಿನ ವರ್ಷದ ₹ 9,516 ಕೋಟಿಗೆ ಹೋಲಿಸಿದರೆ ಶೇ 18.6ರಷ್ಟು ಹೆಚ್ಚಳ ಸಾಧಿಸಿದೆ.

₹ 9 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ: ಶುಕ್ರವಾರದ ಷೇರುಪೇಟೆ ವಹಿವಾಟಿನಲ್ಲಿ ‘ಆರ್‌ಐಎಲ್‌’ನ ಮಾರುಕಟ್ಟೆ ಮೌಲ್ಯವು ₹ 9 ಲಕ್ಷ ಕೋಟಿಗಳಷ್ಟಾಗಿದೆ. ಈ ಮಟ್ಟ ತಲುಪಿದ ದೇಶದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ಜಿಯೊ ಲಾಭ ₹ 990 ಕೋಟಿ: ‘ಆರ್‌ಐಎಲ್‌’ನ ಮೊಬೈಲ್‌ ಸೇವಾ ವಿಭಾಗವಾಗಿರುವ ರಿಲಯನ್ಸ್‌ ಜಿಯೊದ ನಿವ್ವಳ ಲಾಭ ಶೇ 45.4ರಷ್ಟು ಹೆಚ್ಚಳಗೊಂಡು ₹ 990 ಕೋಟಿಗೆ ತಲುಪಿದೆ.

ಆಗಸ್ಟ್‌ ತಿಂಗಳಲ್ಲಿ ಇತರ ಮೊಬೈಲ್‌ ಕಂಪನಿಗಳು ಗ್ರಾಹಕರನ್ನು ಕಳೆದುಕೊಂಡಿದ್ದರೆ, ಜಿಯೊ ಗ್ರಾಹಕರ ಸಂಖ್ಯೆ 84.45 ಲಕ್ಷ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.