ADVERTISEMENT

ರಿಲಯನ್ಸ್‌ ಜುವೆಲ್ಸ್‌ನಿಂದ ವರಲಕ್ಷ್ಮಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 14:00 IST
Last Updated 10 ಆಗಸ್ಟ್ 2022, 14:00 IST
ರಿಲಯನ್ಸ್‌ ಜುವೆಲ್ಸ್‌ನ ವಿಶೇಷ ಆಭರಣ
ರಿಲಯನ್ಸ್‌ ಜುವೆಲ್ಸ್‌ನ ವಿಶೇಷ ಆಭರಣ   

ಬೆಂಗಳೂರು: ರಿಲಯನ್ಸ್‌ ಜುವೆಲ್ಸ್‌ ಕಂಪನಿಯು ‘ವರಲಕ್ಷ್ಮಿ ಕಲೆಕ್ಷನ್ಸ್‌’ ಹೆಸರಿನ ವಿಶೇಷ ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೈಗೂಡಿಸಿಕೊಂಡಿರುವ ಈ ಆಭರಣವು ಪ್ರಾದೇಶಿಕತೆ,ಸಾಂಸ್ಕೃತಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ.

ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಸಾಂಪ್ರದಾಯಿಕ ನೆಕ್‌ಲೆಸ್‌,ಕಿವಿಯೋಲೆ,ಬಳೆ ಮತ್ತು ರಿಂಗ್‌ಗಳು ಲಭ್ಯವಿವೆ. 22 ಕ್ಯಾರಟ್‌ ಹಳದಿ ಚಿನ್ನದಲ್ಲಿ ವಿನ್ಯಾಸ ಮಾಡಲಾಗಿದೆ. ಪುರಾತನ ಚಿನ್ನದ ದೇಗುಲ ವಿನ್ಯಾಸಗಳು ಮತ್ತು ವರ್ಣಮಯ ಹವಳಗಳನ್ನು ಒಳಗೊಂಡಿದೆ. ಪ್ರತಿ ಚಿನ್ನದ ಆಭರಣದ ವಿನ್ಯಾಸವೂ ವಿಭಿನ್ನವಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ವರಲಕ್ಷ್ಮಿ ಕಲೆಕ್ಷನ್‌ 2022ರ ವಿಶಿಷ್ಟ ವಿನ್ಯಾಸಗಳ ಜೊತೆಗೆ, ಚಿನ್ನದ ಆಭರಣ ಮೇಕಿಂಗ್‌ ಮತ್ತು ವಜ್ರದ ಆಭರಣದ ಮೌಲ್ಯದ ಮೇಲೆ ಈ ತಿಂಗಳ ಅಂತ್ಯದವರೆಗೆ ಗ್ರಾಹಕರಿಗೆ ಶೇಕಡ 25ವರೆಗೆ ವಿಶೇಷ ರಿಯಾಯಿತಿ ಸಿಗಲಿದೆ ಎಂದುರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.