ADVERTISEMENT

ರಿಲಯನ್ಸ್‌ ಜಿಯೊ: ಉಚಿತ ವೈಫೈ ಕರೆ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 14:17 IST
Last Updated 8 ಜನವರಿ 2020, 14:17 IST
ಜಿಯೊ
ಜಿಯೊ   

ಬೆಂಗಳೂರು: ಮೊಬೈಲ್‌ ಸೇವಾ ಕಂಪನಿ ರಿಲಯನ್ಸ್‌ ಜಿಯೊ, ವೈ– ಫೈ ಆಧರಿಸಿದ ಉಚಿತ ಧ್ವನಿ ಮತ್ತು ವಿಡಿಯೊ ಕರೆ ಮಾಡುವ ಸೇವೆಗೆ ಚಾಲನೆ ನೀಡಿದೆ.

ಮೊಬೈಲ್‌ ಬಳಕೆದಾರರು ‘ಎಲ್‌ಟಿಇ’ನಿಂದ ‘ವೈ–ಫೈ’ ಆಧರಿಸಿದ ಕರೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಗ್ರಾಹಕರು ಜಿಯೊ ವೈಫೈ ಕರೆ ಮಾಡಲು ಯಾವುದೇ ವೈ-ಫೈ ಸಂಪರ್ಕ ಜಾಲವನ್ನೂ ಬಳಸಬಹುದು. ಧ್ವನಿ ಮತ್ತು ವಿಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗಲಿವೆ. ಜಿಯೋ ವೈ-ಫೈ ಕರೆ ಚಾಲನೆಗೊಳಿಸಲು, Jio.com/wificalling ನಲ್ಲಿ ವಿವರಗಳಿವೆ. ಇದೇ 16ರ ಒಳಗೆ ದೇಶದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಆ್ಯಪಲ್, ಗೂಗಲ್, ಶಿಯೋಮಿ, ಸ್ಯಾಮ್‌ಸಂಗ್, ಮೊಟರೋಲಾ, ಕೂಲ್‌ಪ್ಯಾಡ್, ಲಾವಾ, ಇನ್‌ಫಿನಿಕ್ಸ್, ಐಟಿಲ್, ಮೋಬಿಸ್ಟಾರ್, ವಿವೊ ಮತ್ತುಟೆಕ್ನೊ ಮೊದಲಾದ 12 ಬ್ರಾಂಡ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಮೊಬೈಲ್‌ಗಳಲ್ಲಿ ಈ ಸೌಲಭ್ಯ ಲಭಿಸಲಿದೆ.

ADVERTISEMENT

ಇದನ್ನೂ ಓದಿ: ಇದೋ ಬಂದಿದೆ ‘ವೈಫೈ ಕರೆ’

ವೈಫೈ ಮೂಲಕ ಸ್ಪಷ್ಟವಾದ ವಾಯ್ಸ್ ಮತ್ತು ವಿಡಿಯೊ ಕರೆ ಸಾಧ್ಯವಾಗಲಿದ್ದು ಇದಕ್ಕಾಗಿ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ ಎಂದು ಜಿಯೊ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.