ADVERTISEMENT

ಜಿಯೊ ಫೈಬರ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:45 IST
Last Updated 5 ಸೆಪ್ಟೆಂಬರ್ 2019, 19:45 IST
   

ಮುಂಬೈ: ಬಹುದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ, ಬ್ರಾಡ್‌ಬ್ಯಾಂಡ್‌ ಸೇವೆಯ ಚಿತ್ರಣವನ್ನೇ ಬದಲಿಸಲಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊದ ಫೈಬರ್‌ ಟು ದ ಹೋಂ (ಎಫ್‌ಟಿಟಿಎಚ್‌) ಸೇವೆಗೆ ಗುರುವಾರ ಅಧಿಕೃತ ಚಾಲನೆ ನೀಡಲಾಗಿದೆ.

ವಿಶ್ವದ ಅತಿದೊಡ್ಡ ಮೊಬೈಲ್‌ ದತ್ತಾಂಶ ಸಂಪರ್ಕ ಜಾಲದ ನೆರವಿನಿಂದ ಗೃಹ ಮನರಂಜನೆ, ಸಂವಹನ, ಡೇಟಾ ಬಳಕೆ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರುವ ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ ಇದಾಗಿದೆ. ಟೆಲಿವಿಷನ್‌ ವೀಕ್ಷಕರು ಇಂಟರ್‌ನೆಟ್‌ ಮೂಲಕ ಮನರಂಜನಾ ಕಾರ್ಯಕ್ರಮ ಮತ್ತು ಸಿನಿಮಾ ವೀಕ್ಷಿಸಬಹುದು.

ಅಮೆರಿಕದಲ್ಲಿನ ಬ್ರಾಡ್‌ಬ್ಯಾಂಡ್‌ ಸೇವೆಗಿಂತ (90 ಎಂಬಿಪಿಎಸ್‌) ಹೆಚ್ಚಿನ ವೇಗದ ಸೇವೆ ಲಭ್ಯ ಇರಲಿದೆ. ಮಾಸಿಕ ₹ 699 ರಿಂದ (100 ಎಂಬಿಪಿಎಸ್‌) ₹8,499ರವರೆಗಿನ (1 ಜಿಬಿಪಿಎಸ್‌) ಬ್ರಾಂಜ್‌, ಸಿಲ್ವರ್‌, ಗೋಲ್ಡ್‌, ಡೈಮಂಡ್‌, ಪ್ಲಾಟಿನಂ ಮತ್ತು ಟೈಟಾನಿಯಂ ಯೋಜನೆಗಳು ಇವೆ.

ADVERTISEMENT

ಅಗ್ಗದ ದರದಲ್ಲಿ ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌, ಉಚಿತ ಕರೆ, ಮಿತಿ ರಹಿತ ಡೇಟಾ ಬಳಕೆ, ಟಿವಿ ವಿಡಿಯೊ ಕರೆ / ಕಾನ್‌ಫೆರನ್ಸ್‌ ಸೇವೆಯನ್ನು ಇದು ಒಳಗೊಂಡಿರಲಿದೆ. ವಾರ್ಷಿಕ ಚಂದಾದಾರರಿಗೆ ಉಚಿತ ಸೆಟ್‌ ಟಾಪ್‌ ಬಾಕ್ಸ್‌, ಮಾಸಿಕ ₹ 1,299 (ಗೋಲ್ಡ್‌) ಯೋಜನೆ ಆಯ್ಕೆ ಮಾಡಿಕೊಂಡವರಿಗೆ ಟಿವಿ ಸೆಟ್‌ ನೀಡುವುದು ಸೇರಿದಂತೆ ಹತ್ತಾರು ಆಕರ್ಷಕ ಸೌಲಭ್ಯಗಳನ್ನು ಇದು ಒಳಗೊಂಡಿದೆ.

ಜಿಯೊ ಫೈಬರ್‌ ಕೇಬಲ್‌ ಅಥವಾ ಡಿಟಿಎಚ್‌ ಟಿವಿ ಸೇವೆಗೆ ಪ್ರತ್ಯೇಕ ಶುಲ್ಕ ಇರಲಿದೆ. ಫೈಬರ್‌ ಕೇಬಲ್‌ ತಂತ್ರಜ್ಞಾನ ಆಧರಿಸಿ
ರುವ ಈ ಸೇವೆಯಡಿ ಬ್ರಾಡ್‌ ಬ್ಯಾಂಡ್‌ ಸೇವೆ, ಸ್ಥಿರದೂರವಾಣಿ ಮತ್ತು ಟಿವಿ ವೀಕ್ಷಣೆ ಸೌಲಭ್ಯ ಒದಗಿಸಿಕೊಡಲಿದೆ. ಸ್ಥಿರ ದೂರವಾಣಿ ಸೇವೆಯು ಉಚಿತವಾಗಿರಲಿದೆ.

ಜಿಯೊ ಫೈಬರ್‌ ಸೇವಾ ವಿವರ

ಆನ್‌ಲೈನ್‌ ನೋಂದಣಿ

ಅಂತರ್ಜಾಲ ತಾಣದಲ್ಲಿ (https://fiber.jio.com/registration) ಅಥವಾ ವಾಟ್ಸ್‌ಆ್ಯಪ್‌ ಮೂಲಕ 70008-70008 ಸಂಖ್ಯೆಗೆ HELLO ಸಂದೇಶ ಕಳಿಸಿ ಹೆಸರು ನೋಂದಾಯಿಸಬೇಕು. ಮಾರಾಟ ಪ್ರತಿನಿಧಿಗಳು ಗ್ರಾಹಕರನ್ನು ಸಂಪರ್ಕಿಸಿ ಗುರುತಿನ ದಾಖಲೆ ಪತ್ರ ಪಡೆದು ಸಂಪರ್ಕ ಒದಗಿಸಲಿದ್ದಾರೆ.

***

ಜಿಯೊ ಫೈಬರ್‌ ತಿಂಗಳ ಪ್ರೀಪೇಯ್ಡ್‌ ದರಗಳು

ಯೋಜನೆ;ದರ(₹);ವೇಗ(ಎಂಬಿಪಿಎಸ್‌*);ಪ್ರಯೋಜನ

ಬ್ರಾಂಜ್‌;699;100;100 ಜಿಬಿ+50 ಜಿಬಿ ಹೆಚ್ಚುವರಿ

ಸಿಲ್ವರ್‌;849;100; 200ಜಿಬಿ+200 ಜಿಬಿ ಹೆಚ್ಚುವರಿ

ಗೋಲ್ಡ್‌;1,299;250;500ಜಿಬಿ+250ಜಿಬಿ ಹೆಚ್ಚುವರಿ

ಡೈಮಂಡ್‌;2,499;1250ಜಿಬಿ+250 ಜಿಬಿ ಹೆಚ್ಚುವರಿ

ಪ್ಲಾಟಿನಂ;3,999;1ಜಿಬಿಪಿಎಸ್‌**;2,500ಜಿಬಿ

ಟೈಟಾನಿಯಂ;8,499;1ಜಿಬಿಪಿಎಸ್‌**;5,000 ಜಜಿಬಿ

*ಪ್ರತಿ ಸೆಕೆಂಡ್‌ಗೆ ಮೆಗಾಬೈಟ್ಸ್‌

** ಪ್ರತಿ ಸೆಕೆಂಡ್‌ಗೆ ಗೀಗಾಬೈಟ್ಸ್‌

***

ಇತರ ಸೌಲಭ್ಯಗಳು

ಡೇಟಾ: 30 ದಿನಗಳವರೆಗೆ ಗರಿಷ್ಠ ವೇಗದ ಸೇವೆ

ಧ್ವನಿ: ದೇಶದ ಯಾವುದೇ ಭಾಗಕ್ಕೆ ಉಚಿತ ಕರೆ ಸೌಲಭ್ಯ

ಟಿವಿ ವಿಡಿಯೊ ಕರೆ: ಟಿವಿ ಕಾನ್‌ಫೆರನ್ಸ್‌

ಗೇಮಿಂಗ್‌: ತ್ವರಿತ ಮಾಹಿತಿ ವಿನಿಮಯ

ಹೋಂ ನೆಟ್‌ವರ್ಕಿಂಗ್‌: ಮನೆ ಒಳಗೆ ಮತ್ತು ಹೊರಗೆ ಮಾಹಿತಿ ವಿನಿಮಯ

ವರ್ಚುವಲ್‌ ರಿಯಾಲಿಟಿ (ವಿಆರ್‌) ಅನುಭವ: ವಿಆರ್‌ ಹೆಡ್‌ಸೆಟ್‌ನಲ್ಲಿ ಥೇಟರ್‌ ಅನುಭವ

ಪ್ರೀಮಿಯಂ ಸೌಲಭ್ಯ: ಸಿನಿಮಾ ಬಿಡುಗಡೆಯ ದಿನದ ಮೊದಲ ಪ್ರದರ್ಶನ ಸೌಲಭ್ಯ*

(* ಮುಂದಿನ ವರ್ಷ ಜಾರಿ)

ಒಂದು ಬಾರಿಯ ಪಾವತಿ: ₹ 1,500 + 1,000 (ಭದ್ರತಾ ಠೇವಣಿ + ಮರುಪಾವತಿಸದ ಇನ್‌ಸ್ಟಾಲೇಷನ್‌ ಶುಲ್ಕ)

* ಪ್ರತಿ ಯೋಜನೆಗೂ ಜಿಎಸ್‌ಟಿ ಪ್ರತ್ಯೇಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.